ಈ ರಾಜ್ಯದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲ ಮಹಿಳೆಯರಿಗೂ ಸೋಲು
ಹೊಸದಿಲ್ಲಿ,ಡಿ.11: ಮಿಝೊರಾಂ ವಿಧಾನ ಸಭಾ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು ಮತದಾರ ಅಧಿಕಾರವನ್ನು ಮತ್ತೊಮ್ಮೆ ಮಿಝೊ ರಾಷ್ಟ್ರೀಯ ರಂಗ (ಎಂಎನ್ಎಫ್)ದ ಕೈಗೆ ನೀಡಿದ್ದಾನೆ.
ಈ ಬಾರಿ ಚುನಾವಣೆಯಲ್ಲಿ ಹದಿನಾರು ಮಹಿಳಾ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಆದರೆ ಅವರಲ್ಲಿ ಎಲ್ಲಾರೂ ಗೆಲುವು ಸಾಧಿಸುವಲ್ಲಿ ವಿಫಲವಾಗಿದ್ದಾರೆ. ಎಂಎನ್ಎಫ್ ಯಾವ ಮಹಿಳಾ ಅಭ್ಯರ್ಥಿಗೂ ಟಿಕೆಟ್ ನೀಡಿರಲಿಲ್ಲ. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಉತ್ತರಿಸಿದ್ದ ಪಕ್ಷದ ಆಧ್ಯಕ್ಷ ರೊರಂತಂಗ, ಮಹಿಳಾ ಅಭ್ಯರ್ಥಿಗಳ ಪೈಕಿ ಒಬ್ಬಾಕೆಯೂ ಗೆಲ್ಲುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ತಿಳಿಸಿದ್ದರು. ನವೆಂಬರ್ 28ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ನೂತನವಾಗಿ ಸ್ಥಾಪಿಸಲ್ಪಟ್ಟ ರೊರಮ್ ಥರ್ ಪಕ್ಷ ತಲಾ ಆರು ಮಹಿಳೆಯರಿಗೆ ಟಿಕೆಟ್ ನೀಡಿತ್ತು.
ಕಾಂಗ್ರೆಸ್ ಮತ್ತು ರೊರಮ್ ಪೀಪಲ್ಸ್ ಮೂವ್ಮೆಂಟ್ ತಲಾ ಇಬ್ಬರು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಕಾಂಗ್ರೆಸ್ ಟಿಕೆಟ್ನಲ್ಲಿ ಎರಡನೇ ಬಾರಿ ಸ್ಪರ್ಧಿಸಿದ ಲಹ್ಲಿಂಪುಲಿ ಹ್ಮರ್ ಎಂಎನ್ಎಫ್ನ ಲಲ್ಚಾಮ್ಲಿಯನ ಎದುರು ಸೋಲನುಭವಿಸಿದರು.