ರಾಜಸ್ಥಾನ: ಕಾಂಗ್ರೆಸ್ ನ ಸಿಎಂ ಅಭ್ಯರ್ಥಿ ಆಯ್ಕೆ ರಾಹುಲ್ ಹೆಗಲಿಗೆ

ಹೊಸದಿಲ್ಲಿ, ಡಿ.12: ರಾಜಸ್ಥಾನದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ತಯಾರಿ ನಡೆಸಿರುವ ಕಾಂಗ್ರೆಸ್ ಪಕ್ಷ ಮುಖ್ಯ ಮಂತ್ರಿ ಸ್ಥಾನಕ್ಕೆ ಅಭ್ಯರ್ಥಿಯ ಆಯ್ಕೆಯ ಜವಾಬ್ದಾರಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ವಹಿಸಿಕೊಟ್ಟಿದೆ.
ಇಂದು ನಡೆದ ಸಭೆಯಲ್ಲಿ ಈ ಸರ್ವಾನುಮತದ ನಿರ್ಧಾರ ಕೈ ಗೊಳ್ಳಲಾಗಿದೆ.
ಬುಧವಾರ ಸಂಜೆಯೊಳಗಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ ಎಂದು ಕಾಂಗ್ರೆಸ್ ನ ರಾಜ್ಯಾಧ್ಯಕ್ಷ ಸಚಿನ್ ಪೈಲೆಟ್ ತಿಳಿಸಿದ್ದಾರೆ.
ಸಚಿನ್ ಪೈಲೆಟ್ ಮತ್ತು ಅಶೋಕ್ ಗೆಹ್ಲೋಟ್ ಮುಖ್ಯ ಮಂತ್ರಿ ಹುದ್ದೆಯ ರೇಸ್ ನಲ್ಲಿದ್ದಾರೆ.
ರಾಜಸ್ಥಾನದಲ್ಲಿ ಚುನಾವಣೆ ನಡೆದಿರುವ ವಿಧಾನ ಸಭೆಯ 199 ಸ್ಥಾನಗಳಲ್ಲಿ ಕಾಂಗ್ರೆಸ್ 100 ಸ್ಥಾನಗಳನ್ನು ಜಯಿಸಿದೆ. ಬಹುಮತ ಪಡೆಯಲು 1 ಸ್ಥಾನದ ಕೊರತೆ ಇದೆ. ಬಿಜೆಪಿ 73, ಬಿಎಸ್ ಪಿ 6, ಇತರ ಸ್ಥಾನಗಳು 20. ಈಗಾಗಲೇ ಬಿಎಸ್ಪಿ ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಹಾದಿ ಸುಗಮವಾಗಿದೆ.
Next Story