ಎಸ್ಸೆಸ್ಸೆಫ್ ಹೂಡೆ- ಸಾಸ್ತಾನ ಶಾಖೆ ಮಹಾಸಭೆ
ಉಡುಪಿ, ಡಿ.12: ಎಸ್ಸೆಸ್ಸೆಫ್ ಮಣಿಪಾಲ ಸೆಕ್ಟರ್ ವ್ಯಾಪ್ತಿಯ ಹೂಡೆ ಶಾಖೆಯ ಮಹಾಸಭೆ ಹಾಗೂ 2018-19ನೆ ಸಾಲಿನ ನೂತನ ಸಮಿತಿ ರಚನೆಯು ಹೂಡೆ ದಾರುಸ್ಸಲಾಂ ಮ್ರಸ ಹಾಲ್ನಲ್ಲಿ ಇತ್ತೀಚೆಗೆ ಜರಗಿತು.
ಸೆಕ್ಟರ್ ಚುನಾವಣಾಧಿಕಾರಿ ರಝಾಕ್ ಉಸ್ತಾದ್ ಅಂಬಾಗಿಲು ದುವಾ ನೆರವೇರಿಸಿದರು. ಶಾಖಾಧ್ಯಕ್ಷ ಸೈಯದ್ ಯೂಸುಫ್ ಅಧ್ಯಕ್ಷತೆ ವಹಿಸಿದ್ದರು. ವೀಕ್ಷಕರಾಗಿ ಶಾಹುಲ್ ದೊಡ್ಡಣಗುಡ್ಡೆ ಆಗಮಿಸಿದ್ದರು. ಪ್ರಧಾನ ಕಾರ್ಯದರ್ಶಿ ತಯ್ಯಬ್ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷ ರಾಗಿ ಟಿ.ಎಸ್.ಸಿಹಾನ್, ಪ್ರಧಾನ ಕಾರ್ಯದರ್ಶಿಯಾಗಿ ಕುದುರ್ ಫಾಯಿಝ್, ಕೋಶಾಧಿಕಾರಿಯಾಗಿ ಸೈಯದ್ ಅಸ್ರಾರ್, ಉಪಾಧ್ಯಕ್ಷರಾಗಿ ಸೈಯದ್ ಯೂಸುಫ್, ಮುಹಮ್ಮದ್, ಜೊತೆ ಕಾರ್ಯದರ್ಶಿಯಾಗಿ ಅಪ್ರಾಝ್, ತಯ್ಯಬ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಅದ್ನಾನ್, ಸೆಕ್ಟರ್ ಕೌನ್ಸಿಲ್ ಸದಸ್ಯರಾಗಿ ಟಿಎಸ್.ಸಿಹಾನ್, ಫಾಯಿಝ್, ಅಸ್ರಾರ್, ಅಪ್ರಾಝ್, ಅಯಾನ್, ತಬಾರಕ್, ಅರಫತ್ ಅವರನ್ನು ಆಯ್ಕೆ ಮಾಡಲಾಯಿತು.
ಸಾಸ್ತಾನ ಶಾಖೆ: ಸಾಸ್ತಾನ ಶಾಖೆಯ ಮಹಾಸಭೆ ಹಾಗೂ ನೂತನ ಪದಾಧಿ ಕಾರಿಗಳ ಆಯ್ಕೆ ಇತ್ತೀಚೆಗೆ ಸಾಸ್ತಾನ ಮದ್ರಸ ಹಾಲ್ನಲ್ಲಿ ಜರಗಿತು.
ಸಾಸ್ತಾನ ಮಸೀದಿಯ ಖತೀಬ್ ಬಿ.ಎ.ಮಹಮ್ಮದಾಲಿ ಸಹದಿ ದುವಾ ನೆರವೇರಿಸಿದರು. ಶಾಖಾಧ್ಯಕ್ಷ ರಮೀಝ್ ಅಧ್ಯಕ್ಷತೆ ವಹಿಸಿದರು. ವೀಕ್ಷಕರಾಗಿ ಉಡುಪಿ ಡಿವಿಷನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಸಹದಿ ಆಗಮಿಸಿದ್ದರು. ಸೆಕ್ಟರ್ ಚುನಾವಣಾಧಿಕಾರಿಯಾಗಿ ನಝೀರ್ ನೇತೃತ್ವ ವಹಿಸಿದ್ದರು. ಪ್ರಧಾನ ಕಾರ್ಯ ದರ್ಶಿ ರಝಾಕ್ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಧ್ಯಕ್ಷರಾಗಿ ಬಿ.ಎ.ಮಹಮ್ಮದಾಲಿ ಸಹದಿ ಬರುವ, ಅಧ್ಯಕ್ಷರಾಗಿ ಪಿರೋಝ್ ಖಾನ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಸಫ್‌ವಾನ್, ಕೋಶಾಧಿಕಾರಿಯಾಗಿ ಅಪ್ತಾಬ್, ಉಪಾಧ್ಯಕ್ಷರಾಗಿ ನಾಸೀರ್, ಸಫದ್, ಜೊತೆ ಕಾರ್ಯದರ್ಶಿಯಾಗಿ ಅದ್ನಾನ್, ಮುಸ್ತಫ, ಕ್ಯಾಂಪಸ್ ಕಾರ್ಯ ದರ್ಶಿಯಾಗಿ ಮುಹಮ್ಮದ್ ಮಾಸೂಕ್, ಸೆಕ್ಟರ್ ಕೌನ್ಸಿಲ್ ಸದಸ್ಯರಾಗಿ ಫಿರೋಝ್, ರಶೀದ್, ಸಪ್ವಾನ್, ಸಫಾದ್, ಅಪ್ತಾಬ್, ಅದ್ನಾನ್ ಇವರನ್ನು ಆಯ್ಕೆ ಮಾಡಲಾಯಿತು.