ಕಾಪು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಮುದ್ದು ಮೂಡುಬೆಳ್ಳೆಗೆ ಅಧಿಕೃತ ಆಮಂತ್ರಣ

ಶಿರ್ವ, ಡಿ.12: ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿರುವ ಕವಿ, ಸಾಹಿತಿ ಮುದ್ದು ಮೂಡುಬೆಳ್ಳೆ ಅವರಿಗೆ ಕಸಾಪ ಉಡುಪಿ ಜಿಲ್ಲಾ ಸಮಿತಿ, ಕಾಪು ತಾಲೂಕು ಘಟಕ ಹಾಗೂ ಸಮ್ಮೇಳನ ಸಮಿತಿಯ ವತಿಯಿಂದ ಮೂಡುಬೆಳ್ಳೆ ನಿವಾಸದಲ್ಲಿ ಸಮಿತಿಯ ವತಿಯಿಂದ ಗೌರವಿಸಿ ಅಧಿಕೃತವಾಗಿ ಆಮಂತ್ರಣವನ್ನು ನೀಡಿ ಅಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಸಮ್ಮೇಳನ ಸಮಿತಿಯ ಉಪಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಕಸಾಪ ತಾಲೂಕು ಘಟಕದ ಕೋಶಾಧಿಕಾರಿ ಎಸ್.ಎಸ್.ಪ್ರಸಾದ್ ಬಂಟಕಲ್ಲು, ಸಮತಿ ಸದಸ್ಯರಾದ ಹರೀಶ್ ಕಟ್ಪಾಡಿ, ಕೃಷ್ಣಕುಮಾರ್ ಮಟ್ಟು, ಸಲಹಾ ಸಮಿತಿಯ ಪದ್ಮನಾ ನಾಯಕ್ ಬೆಳ್ಳೆ, ತಾಪಂ ಸದಸ್ಯೆ ಸುಜಾತಾ ಸುವರ್ಣ ಮೊದಲಾವರು ಉಪಸ್ಥಿತರಿದ್ದರು.
ಕಾಪು ತಾಲೂಕು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಶುಭಕೋರಿದರು. ಸಮ್ಮೇಳನದ ಗೌರವ ಕಾರ್ಯದರ್ಶಿ ಕುತ್ಯಾರು ಪ್ರಸಾದ್ ಶೆಟ್ಟಿ ವಂದಿಸಿದರು.
Next Story