Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಶಾರೂಕ್ ಖಾನ್ ಒಬ್ಬ ಅಸಂಪೂರ್ಣ ನಟನಂತೆ!

ಶಾರೂಕ್ ಖಾನ್ ಒಬ್ಬ ಅಸಂಪೂರ್ಣ ನಟನಂತೆ!

ವಾರ್ತಾಭಾರತಿವಾರ್ತಾಭಾರತಿ12 Dec 2018 9:18 PM IST
share
ಶಾರೂಕ್ ಖಾನ್ ಒಬ್ಬ ಅಸಂಪೂರ್ಣ ನಟನಂತೆ!

ಬಾಲಿವುಡ್‌ನಲ್ಲಿ ನಟ ಶಾರೂಕ್ ಖಾನ್‌ಗೆ ಯಾರೂ ಶತ್ರುಗಳಿಲ್ಲ. ಹಳಬರು ಹೊಸಬರು ಎಲ್ಲರ ಜೊತೆಯೂ ಬೆರೆಯುವ ಶಾರೂಕ್ ಬಾಲಿವುಡ್ ಬಾದ್‌ಶಾಹ್, ಕಿಂಗ್ ಖಾನ್ ಎಂದೇ ಪ್ರಸಿದ್ಧಿ. ಹಾಗಾಗಿ ಕಿಂಗ್ ಖಾನ್ ನಟನೆ ಬಗ್ಗೆ ಉಲ್ಟಾ ಮಾತನಾಡುವವರು ಯಾರೂ ಇಲ್ಲ ಎಂದೇ ಹೇಳಬಹುದು.

ಆದರೆ ಸ್ವತಃ ಶಾರೂಕ್ ಖಾನ್ ಹೇಳುವಂತೆ ಅವರೊಬ್ಬ ಅಸಂಪೂರ್ಣ ನಟನಂತೆ!

“ನಾನು ಯಾವತ್ತೂ ನನ್ನನ್ನು ಓರ್ವ ಸಂಪೂರ್ಣ ನಟನೆಂದು ಭಾವಿಸಿಲ್ಲ. ಅದೇ ಕಾರಣದಿಂದ ನಾನು ಕಳೆದ ಮೂರು ದಶಕಗಳಿಂದ ಚಿತ್ರರಂಗದಲ್ಲಿ ವಿಶ್ರಮಿಸದೆ ಕೆಲಸ ಮಾಡುತ್ತಿದ್ದೇನೆ” ಎಂದು ಖಾನ್ ತಿಳಿಸಿದ್ದಾರೆ. ಅಂತಿಮ ಫಲಿತಾಂಶಕ್ಕೆ ಕಾಯುವ ಬದಲು ನಾನು ಮೈಲುಗಲ್ಲುಗಳನ್ನು ಸಂಭ್ರಮಿಸುವುದರಲ್ಲಿ ನಂಬಿಕೆಯಿಟ್ಟವನು ಎಂದು 53ರ ಹರೆಯದ ಶಾರೂಕ್‌ ತಿಳಿಸಿದ್ದಾರೆ.

“ಓರ್ವ ನಟನಾಗಿ ನಾನು ಅಸಂಪೂರ್ಣನಾಗಿದ್ದೇನೆ ಮತ್ತು ಅದು ನನಗೆ ತಿಳಿದಿದೆ. ನಾನು ಹಾಗೆ ತಿಳಿಯದಿದ್ದರೆ ನನಗೆ ಕೆಲಸ ಮಾಡಲು ಇಷ್ಟವಿರುವುದಿಲ್ಲ. ನಾನು ಓರ್ವ ಸಂಪೂರ್ಣ ನಟನಾಗಿದ್ದರೆ ಮತ್ಯಾಕೆ ನಾನು ಪ್ರತಿದಿನ ಬೆಳಿಗ್ಗೆ ಎದ್ದು ಇನ್ನೇನನ್ನಾದರೂ ಹೊಸತು ಮಾಡುವ ಪ್ರಯತ್ನವನ್ನು ಮಾಡಬೇಕು?” ಎಂದು ಶಾರೂಕ್ ಪ್ರಶ್ನಿಸಿದ್ದಾರೆ.

“ಓರ್ವ ನಟನಾಗಿ, ನಿರ್ಮಾಪಕನಾಗಿ ನಾನು ಕೆಲಸ ಮಾಡುವ ವಾಣಿಜ್ಯ ಸಿನೆಮಾದ ಮಿತಿಯಲ್ಲೇ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಏನನ್ನಾದರೂ ಹೊಸತನ್ನು ತರಲು ಸಾಧ್ಯವೇ ಎಂಬ ಬಗ್ಗೆ ನಾನು ಯೋಚಿಸುತ್ತಿರುತ್ತೇನೆ. ನಾನು ಅಸಂಪೂರ್ಣನಾಗಿದ್ದೇನೆ ಮತ್ತು ಚಡಪಡಿಕೆ ಹೊಂದಿದ್ದೇನೆ. ನೀವು ನಿಮ್ಮನ್ನು ಸಂಪೂರ್ಣ ಎಂದು ತಿಳಿದರೆ ನೀವು ಆಸಕ್ತಿಹೀನರಾಗುತ್ತೀರಿ” ಎನ್ನುವುದು ಶಾರೂಕ್ ವಾದ. ಶಾರೂಕ್‌ನ ಮುಂದಿನ ಸಿನೆಮಾ ‘ಝೀರೊ’ ಜನರ ಅಸಂಪೂರ್ಣತೆಯನ್ನು ಸಂಭ್ರಮಿಸುತ್ತದೆ.

ಆನಂದ್ ಎಲ್ ರಾಯ್ ನಿರ್ದೇಶನದ ಝೀರೊ ಸಿನೆಮಾದಲ್ಲಿ ಶಾರೂಕ್ ಓರ್ವ ಕುಬ್ಜ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅನುಷ್ಕಾ ಶರ್ಮಾ ಸೆರೆಬ್ರಲ್ ಪಾಲ್ಸಿ ಎಂಬ ಕಾಯಿಲೆಯಿಂದ ಬಳಲುವ ಓರ್ವ ವಿಜ್ಞಾನಿಯಾಗಿ ಮತ್ತು ಕತ್ರೀನಾ ಕೈಫ್ ಭಾವನಾತ್ಮಕವಾಗಿ ಅಸಂಪೂರ್ಣವಾಗಿರುವ ಓರ್ವ ನಟಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಈ ಪಾತ್ರಗಳನ್ನು ಕರುಣೆಯ ದೃಷ್ಟಿಯಿಂದ ನೋಡಲಾಗಿಲ್ಲ ಮತ್ತು ಪ್ರೇಕ್ಷಕರು ಇವರ ಬಗ್ಗೆ ದಯೆ ತೋರಬೇಕೆಂದೂ ಹೇಳಲಾಗಿಲ್ಲ ಎಂದು ಕಿಂಗ್ ಖಾನ್ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X