ಪಾಂಬೂರು ಚರ್ಚ್ ವಾರ್ಷಿಕ ಉತ್ಸವ ಸಂಪನ್ನ

ಶಿರ್ವ, ಡಿ.12: ಪಾಂಬೂರು ಪವಿತ್ರ ಶಿಲುಬೆಯ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಬುಧವಾರ ಸಂಪನ್ನಗೊಂಡಿತು.
ಮಂಗಳೂರು ಧರ್ಮಪ್ರಾಂತದ ಜನರಲ್ ವಿಕಾರ್ ರೆ.ಫಾ.ಮ್ಯಾಕ್ಸಿಮ್ ನೊರೋನ್ನ ಪವಿತ್ರ ಬಲಿಪೂಜೆ, ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಆಶೀರ್ವಚನ ನೀಡಿ, ದೇವರ ವಾಕ್ಯವು ಕುಟುಂಬದ ಐಕ್ಯತೆಯನ್ನು ಕಾಪಾಡಿ ಕೊಳ್ಳುವಲ್ಲಿ ಪೂರಕವಾಗಿದ್ದು, ಧರ್ಮಮಾರ್ಗದಲ್ಲಿ ನಡೆಯಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಚರ್ಚ್‌ನ ಧರ್ಮಗುರು ರೆ,ಫಾ.ಪೌಲ್ ರೇಗೋ ಉಪಸ್ಥಿತರಿದ್ದರು. ಶಿರ್ವ ವಾರಾಡೊದ ಎಲ್ಲಾ ಧರ್ಮಕೇಂದ್ರಗಳ ಧರ್ಮ ಗುರುಗಳು, ಧರ್ಮಭಗಿನಿಯರು, ಭಕ್ತಾಧಿಗಳು ಧಾರ್ಮಿಕ ಪೂಜಾ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು. ಪೂರ್ವಭಾವಿಯಾಗಿ ರವಿವಾರ ಸಂಜೆ ಭಾತೃತ್ವದ ವಿಶೇಷ ಪ್ರಾರ್ಥನೆ, ಮಂಗಳವಾರ ದೇವರ ವಾಕ್ಯದ ಪ್ರಾರ್ಥನಾ ವಿಧಿಗಳು ನೆರವೇರಿದವು.
Next Story