ಮಂಗಳೂರು : ಸ್ಮಾರ್ಟ್ ಕಿಡ್ಸ್ ಪ್ರೀಸ್ಕೂಲ್ ಶುಭಾರಂಭ

ಮಂಗಳೂರು, ಡಿ. 12 : ಖ್ಯಾತ ಪ್ರೀಸ್ಕೂಲ್ ಬ್ರ್ಯಾಂಡ್ ಸ್ಮಾರ್ಟ್ ಕಿಡ್ಸ್ ನ ಮಂಗಳೂರು ಪ್ರಥಮ ಶಾಖೆ ಇತ್ತೀಚಿಗೆ ಅತ್ತಾವರ ಕಾಪ್ರಿಗುಡ್ಡದಲ್ಲಿ ಶುಭಾರಂಭಗೊಂಡಿತು.
ಮನಪಾ ಸದಸ್ಯ ಅಬ್ದುಲ್ ರವೂಫ್ ಅವರು ಸ್ಮಾರ್ಟ್ ಕಿಡ್ಸ್ ಪ್ರೀಸ್ಕೂಲ್ ಅನ್ನು ಉದ್ಘಾಟಿಸಿದರು.
ಆ ಬಳಿಕ ಮಾತನಾಡಿದ ಅವರು ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವ ಮಂಗಳೂರಿನಲ್ಲಿ ಈಗ ಸ್ಮಾರ್ಟ್ ಕಿಡ್ಸ್ ಪ್ರೀಸ್ಕೂಲ್ ಪ್ರಾರಂಭವಾಗುತ್ತಿದೆ. ಇಂತಹ ಖ್ಯಾತ ಶಿಕ್ಷಣ ಸಂಸ್ಥೆಗಳು ಮಂಗಳೂರಿಗೆ ಬರುತ್ತಿರುವುದು ಸಂತಸದ ವಿಷಯ. ನನ್ನ ವಾರ್ಡ್ ನಲ್ಲಿ ಇಂತಹ ಸಂಸ್ಥೆಯೊಂದು ಪ್ರಾರಂಭವಾಗಿರುವುದು ನನಗೆ ಖುಷಿಯ ವಿಷಯ ಎಂದು ಹೇಳಿ ಶುಭ ಹಾರೈಸಿದರು.
2008 ರಲ್ಲಿ ಪ್ರಾರಂಭವಾಗಿರುವ ಸ್ಮಾರ್ಟ್ ಕಿಡ್ಸ್ ಪ್ರೀಸ್ಕೂಲ್ ಗಳ ಸರಣಿಯಲ್ಲಿ ಈಗ ದೇಶಾದ್ಯಂತ 250ಕ್ಕೂ ಹೆಚ್ಚು ಶಾಖೆಗಳಿವೆ. ನಮ್ಮ ಪಠ್ಯ ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕವಾಗಿದೆ ಎಂದು ಸ್ಮಾರ್ಟ್ ಕಿಡ್ಸ್ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ರಾಮ ಕೃಷ್ಣನ್ ಕೋಮರ್ಲ ತಿಳಿಸಿದರು.
ಉಡುಪಿ ಕಾಂಗ್ರೆಸ್ ನ ಉಪಾಧ್ಯಕ್ಷ ಅವೆಲಿನ್ ಆರ್ ಲೂಯಿಸ್ , ಮೊಯ್ದಿನ್, ಮಂಗಳೂರು ಶಾಖೆಯ ಮುಖ್ಯಸ್ಥೆ ನೌರೀನ್ ನವೀದ್ ಶೇಖ್ ಉಪಸ್ಥಿತರಿದ್ದರು.