‘ಎನ್‌ಎಸ್‌ಎಸ್‌ನಿಂದ ಜೀವನದಲ್ಲಿ ಜವಾಬ್ದಾರಿಯ ಅರಿವು’

ನಡೂರು(ಬ್ರಹ್ಮಾವರ), ಡಿ.12: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಏಳು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ವಿದ್ಯಾರ್ಥಿಗಳೇ ಪ್ರತಿಯೊಂದು ಕೆಲಸವನ್ನು ಜವಾಬ್ದಾರಿ ವಹಿಸಿಕೊಂಡು ಮಾಡುವುದರಿಂದ ಅವರಲ್ಲಿ ತಮ್ಮ ಜವಾಬ್ದಾರಿಗಳ ಬಗ್ಗೆ ಅರಿವು ಮೂಡುತ್ತದೆ ಎಂದು ಉಡುಪಿ ತಾಪಂ ಸದಸ್ಯ ಭುಜಂಗ ಶೆಟ್ಟಿ ಹೇಳಿದ್ದಾರೆ.
ನಡೂರು ಪಟೇಲ್ ಅಂತಯ್ಯ ಶೆಟ್ಟಿ ಸ್ಮಾರಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ರಹ್ಮಾವರ ಕ್ರಾಸ್‌ಲ್ಯಾಂಡ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ವಿಶೇಷ ಶಿಬಿರದಲ್ಲಿ ಕಲಿತ ಗುಣಗಳನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಈ ರೀತಿಯ ಶಿಬಿರಗಳನ್ನು ನಡೆಸುವುದು ಸ್ವಾರ್ಥಕವೆನಿಸಿಕೊಳ್ಳುತ್ತದೆ ಎಂದವರು ಹೇಳಿದರು.
ಕಾಡೂರು ಗ್ರಾಪಂ ಅಧ್ಯಕ್ಷ ಆನಂದ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಜಯರಾಮ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಪ್ರೊ.ಸ್ಯಾಮುಯೆಲ್ ಕೆ ಸ್ಯಾಮುಯೆಲ್, ಶಾಲಾ ಮುಖ್ಯ ಶಿಕ್ಷಕಿ ಗ್ರೇಸಿ ರೆಬೆಲ್ಲೋ, ಅಧ್ಯಾಪಕ ವಿಷ್ಣು ಮೊಗೇರ, ಕ್ರಾಸ್‌ಲ್ಯಾಂಡ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಮಟಪಾಡಿ, ಯೋಗೀಶ್ ಉಪಸ್ಥಿತರಿದ್ದರು.
ಇದೇ ಸಂದರ್ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಎನ್.ಎಸ್.ಎಸ್ ಶಿಬಿರಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು. ಶಿಬಿರಾಧಿಕಾರಿ ಗಿರೀಶ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದ ನಾಯಕ ಮಣಿಕಂಠ ಸ್ವಾಗತಿಸಿದರು. ನಾಯಕಿ ಸೌಜನ್ಯ ವಂದಿಸಿದರು. ಚಂದ್ರಾವತಿ ಕಾರ್ಯಕ್ರಮ ನಿರೂಪಿಸಿದರು.
ಏಳು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಪ್ರತಿದಿನ ಮುಂಜಾನೆ ಶಿಬಿರಾರ್ಥಿಗಳಿಗೆ ಆರ್ಟ್ ಆಪ್ ಲೀವಿಂಗ್‌ನ ಶಿಕ್ಷಕ ರಾಘವೇಂದ್ರ ಪೈ ಅವರಿಂದ ಯೋಗ ತರಬೇತಿ ನಡೆಯುತ್ತಿರುವುದು ಶಿಬಿರದ ವಿಶೇಷವಾಗಿದೆ.