ಉಡುಪಿ: ಕಾಂಗ್ರೆಸ್ ಕಾರ್ಯಕರ್ತರಿಂದ ವಿಜಯೋತ್ಸವ

ಉಡುಪಿ, ಡಿ.12: ಪಂಚರಾಜ್ಯ ಚುನಾವಣೆಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ರಾಜಸ್ಥಾನ, ಛತ್ತೀಸ್‌ಗಢ ಹಾಗೂ ಮಧ್ಯ ಪ್ರದೇಶ ರಾಜ್ಯದಲ್ಲಿ ಬಹುಮತ ಪಡೆದ ಸಂಭ್ರಮಾಚರಣೆಯನ್ನು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಉಡುಪಿ ನಗರದಲ್ಲಿ ಪಟಾಕಿ, ಸಿಡಿಮದ್ದು ಬಿಡುವ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ನ ದಿನೇಶ್ ಪುತ್ರನ್, ಪ್ರಖ್ಯಾತ್ ಶೆಟ್ಟಿ, ಕೃಷ್ಣಮೂರ್ತಿ ಆಚಾರ್ಯ, ಬಿ. ನರಸಿಂಹ ಮೂರ್ತಿ, ಮಹಾಬಲ ಕುಂದರ್, ಸತೀಶ್‌ಅಮೀನ್ ಪಡುಕರೆ, ಸದಾಶಿವ ಕಟ್ಟೆಗುಡ್ಡೆ, ಗಣೇಶ್ ನೆರ್ಗಿ, ನಾರಾಯಣ ಕುಂದರ್, ಜನಾರ್ದನ ಭಂಡಾರ್ಕಾರ್, ಸುನಿಲ್ ಕಪ್ಪೆಟ್ಟು, ಸಾಯಿರಾಜ್ ಕೋಟ್ಯಾನ್, ಗಿರೀಶ್ ಕುಮಾರ್, ನವೀನ್ ಶೆಟ್ಟಿ, ಶೇಖರ್ ಜಿ. ಕೋಟ್ಯಾನ್, ಪ್ರಶಾಂತ್ ಪೂಜಾರಿ, ರಿಯಾಜ್ ಪಳ್ಳಿ, ಅನ್ಸರ್, ಆನಂದ ಬಂಗೇರ, ಶ್ರೀನಿವಾಸ್ ಹೆಬ್ಬಾರ್, ಸುಕೇಶ್ ಶೆಟ್ಟಿ ಬನ್ನಂಜೆ, ಗೋವರ್ಧನ ಅಮೀನ್, ಗಣೇಶ್ ದೊಡ್ಡಣಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.
Next Story