ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಸಂಭ್ರಮ: 400 ವರ್ಷಗಳ ಬ್ರಹ್ಮರಥಕ್ಕೆ ಕೊನೆಯ ರಥೋತ್ಸವ

ಸುಬ್ರಹ್ಮಣ್ಯ, ಡಿ.13: ಚಂಪಾಷಷ್ಠಿಯ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಇಂದು ಬ್ರಹ್ಮ ರಥೋತ್ಸವ ವೈಭವದಿಂದ ನೆರವೇರಿತು.
ಮುಂಜಾನೆ 6:41ರ ವೃಶ್ಚಿಕ ಮುಹೂರ್ತದಲ್ಲಿ ನಡೆದ ವೈಭವಪೂರ್ಣ ತೇರು ಉತ್ಸವ ನಡೆಯಿತು. ರಥೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಮಂದಿ ಭಾಗಿಯಾದರು.
ದೇವರ ಉತ್ಸವ ಮೂರ್ತಿಯನ್ನು ರಥರೂಡ ಮಾಡಿದ ಬಳಿಕ ಪಂಚಮಿ ರಥವನ್ನು ದೇವಸ್ಥಾನದ ಎದುರಿನ ರಥಬೀದಿಯಲ್ಲಿ ಎಳೆದ ಬಳಿಕ ಬ್ರಹ್ಮರಥವನ್ನು ಭಕ್ತರು ಎಳೆದರು.
ಬ್ರಹ್ಮರಥ ಕಳೆದ ನಾಲ್ಕು ನೂರು ವರ್ಷಗಳಿಂದ ಬಳಸುತ್ತಿದ್ದು, ಮುಂದಿನ ವರ್ಷದಿಂದ ಹೊಸ ರಥ ಬರಲಿದೆ. ಆದುದರಿಂದ ಇಂದು ನಡೆದ ಬ್ರಹ್ಮ ರಥೋತ್ಸವದಲ್ಲಿ ಬ್ರಹ್ಮ ರಥವನ್ನು ಕೊನೆಯ ಬಾರಿಗೆ ಎಳೆಯಲಾಯಿತು.
Next Story