ಗ್ರೀನ್ ವ್ಯೂವ್ ವಿದ್ಯಾ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಮಂಗಳೂರು, ಡಿ. 13: ಜಮೀಯ್ಯತುಲ್ ಫಲಾಹ್ ವಿದ್ಯಾಸಂಸ್ಥೆಯ ಅಧೀನದಲ್ಲಿರುವ ಗ್ರೀನ್ ವ್ಯೂವ್ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜು ಇದರ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಿಯ್ಯತುಲ್ ಫಲಾಹ್ ದ.ಕ. ಹಾಗೂ ಉಡುಪಿ ಜಿಲ್ಲೆ ಇದರ ಕೋಶಾಧಿಕಾರಿ ಇಬ್ರಾಹಿಂ ಕೋಡಿಜಾಲ್ ವಹಿಸಿದ್ದರು. ಎ.ಬಿ. ಹಸೈನಾರ್ ಅವರು ಕ್ರೀಡಾಕೂಟ ಉದ್ಘಾಟನೆಗೈದರು. ಜಮಿಯ್ಯತುಲ್ ಫಲಾಹ್ ಇದರ ಆಡಳಿತಾಧಿಕಾರಿ ಶಮೀರ್ ಕುದ್ರೋಳಿ, ಅಲ್ ಇಹ್ಸಾನ್ ಯೂತ್ ಅಸೋಸಿಯೇಶನ ಇದರ ಅಧ್ಯಕ್ಷರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಸಿರಾಜ್ ಅಡ್ಕರೆಪಡ್ಪು ಕ್ರೀಡಾಕೂಟವನ್ನುದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಗ್ರೀನ್ ವ್ಯೂವ್ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎವ್ಲಿನ್ ಡಿ ಐಮನ್, ಸಮಾಜ ಸೇವಕರಾದ ಮುಹಮ್ಮದ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು ಹಾಜರಿದ್ದರು. ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಮುಸ್ತಫಾ ವಂದನೆ ಸ್ವೀಕರಿಸಿದರು. ಉಪಾಧ್ಯಕ್ಷೆ ಸ್ನೇಹದೀಪ ಸಂಚಾಲಕಿ ತಬಸ್ಸುಂ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಪಂಚಾಯತ್ ಸದಸ್ಯರಾದ ತಾಹಿರಾ ಹಾಗೂ ಪ್ಲೇವಿ ಉಪಸ್ಥಿತರಿದ್ದರು.
ಕ್ರೀಡಾ ಸಮವಸ್ತ್ರದೊಂದಿಗೆ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪ್ರಾಂಶುಪಾಲರಾದ ಅಬೂಬಕ್ಕರ್ ಕೆ ಸ್ವಾಗತಿಸಿದರು, ದೈಹಿಕ ಶಿಕ್ಷಣ ನಿರ್ದೇಶಕ ಮಹಮ್ಮದ್ ಅಶ್ರಫ್ ವಂದಿಸಿದರು. ಪ್ರೌಢ ಶಾಲಾ ಶಿಕ್ಷಕಿ ರಶ್ಮಿ ಎಸ್ ಕಾರ್ಯಕ್ರಮ ನಿರ್ವಹಿಸಿದರು.