ಪಡುಬೆಳ್ಳೆ: ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

ಶಿರ್ವ, ಡಿ.13: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ವತಿ ಯಿಂದ ಪಡುಬೆಳ್ಳೆ ಶ್ರೀನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂದು ವಾರಗಳ ಕಾಲ ಜರುಗಿದ ವಾರ್ಷಿಕ ವಿಶೇಷ ಶಿಬಿರವು ಬುಧವಾರ ಸಮಾಪನಗೊಂಡಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶಿರ್ವ ಆರೋಗ್ಯ ಮಾತಾ ದೇವಾ ಲಯದ ಸಹಾಯಕ ಧರ್ಮಗುರು ರೆ.ಪಾ.ಅಶ್ವಿನ್ ಅರಾನ್ನಾ ಮಾತನಾಡಿ, ಶಿಬಿರದಲ್ಲಿ ಕಲಿತ ಒಳ್ಳೆಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಸಮಾರೋಪ ಭಾಷಣ ಮಾಡಿದರು. ಜಿಪಂ ಸದಸ್ಯ ವಿಲ್ಸನ್ ರೊಡ್ರಿಗಸ್, ಶ್ರೀನಾರಾಯಣಗುರು ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಜಿನರಾಜ್ ಸಿ.ಸಾಲಿಯಾನ್, ತಾಪಂ ಸದಸ್ಯೆ ಸುಜಾತಾ ಸುವರ್ಣ ಮಾತನಾಡಿದರು.
ಈ ಸಂದರ್ದಲ್ಲಿ ಉತ್ತಮ ಶಿಬಿರಾರ್ಥಿ ಕೃತಿಕಾ ಅರಸ್, ಉತ್ತಮ ಕಾಯಕ ಪಟುಗಳಾದ ಮಹಮ್ಮದ್ ನಬಿ, ವೈಷ್ಣವಿಯವರನ್ನು ಅಭಿನಂದಿಸಲಾಯಿತು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ರಾಜನ್ ವಿ.ಎನ್.ವಹಿಸಿದ್ದರು. ನಿಶ್ಮಿತಾ ಪದ್ಮಶಾಲಿ ಸ್ವಾಗತಿಸಿದರು. ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾಧಿಕಾರಿ ಪ್ರೊ.ಪೂರ್ಣಿಮಾ ಜಿ.ವಿ. ವಂದಿಸಿದರು.