ಮುಗಿಯದ ರಾಜಸ್ಥಾನ ಸಿಎಂ ಆಯ್ಕೆ ಗೊಂದಲ: ಸಚಿನ್ ಪೈಲಟ್ ಅಭಿಮಾನಿಗಳಿಂದ ರಸ್ತೆ ತಡೆ
![ಮುಗಿಯದ ರಾಜಸ್ಥಾನ ಸಿಎಂ ಆಯ್ಕೆ ಗೊಂದಲ: ಸಚಿನ್ ಪೈಲಟ್ ಅಭಿಮಾನಿಗಳಿಂದ ರಸ್ತೆ ತಡೆ ಮುಗಿಯದ ರಾಜಸ್ಥಾನ ಸಿಎಂ ಆಯ್ಕೆ ಗೊಂದಲ: ಸಚಿನ್ ಪೈಲಟ್ ಅಭಿಮಾನಿಗಳಿಂದ ರಸ್ತೆ ತಡೆ](https://www.varthabharati.in/sites/default/files/images/articles/2018/12/13/167759.jpg)
ಹೊಸದಿಲ್ಲಿ, ಡಿ.13: ರಾಜಸ್ಥಾನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವ ಕುತೂಹಲದ ನಡುವೆಯೇ ಸಚಿನ್ ಪೈಲಟ್ ಅವರ ಅಭಿಮಾನಿಗಳು ರಾಜ್ಯದ ಕೆಲವೆಡೆ ರಸ್ತೆ ತಡೆ ನಡೆಸಿದ್ದಾರೆ ಎಂದು ವರದಿಯಾಗಿದೆ. ‘ಶಾಂತಿ ಕಾಪಾಡುವಂತೆ ಹಾಗು ಸಂಯಮದಿಂದ ವರ್ತಿಸುವಂತೆ” ಪೈಲಟ್ ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ.
ಎರಡು ಬಾರಿಯ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
“ಕಾರ್ಯಕರ್ತರು ಶಾಂತಿ ಕಾಪಾಡಬೇಕೆಂದು ನಾನು ವಿನಂತಿಸುತ್ತಿದ್ದೇನೆ. ನನಗೆ ನಾಯಕತ್ವದ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಯಾವುದೇ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಪಕ್ಷದ ಘನತೆ ಎತ್ತಿಹಿಡಿಯುವುದು ನಮ್ಮ ಜವಾಬ್ದಾರಿಯಾಗಿದೆ” ಎಂದು ಪೈಲಟ್ ಟ್ವೀಟ್ ಮಾಡಿದ್ದಾರೆ.
Next Story