ಕಲ್ಲಡ್ಕ ಟಿಪ್ಪು ಸುಲ್ತಾನ್ ಯಂಗ್ ಮೆನ್ಸ್ ವತಿಯಿಂದ ರಕ್ತದಾನ ಶಿಬಿರ

ವಿಟ್ಲ, ಡಿ. 13: ಕಲ್ಲಡ್ಕ ಟಿಪ್ಪು ಸುಲ್ತಾನ್ ಯಂಗ್ ಮೆನ್ಸ್ ಇದರ ಮೂರನೇ ವಾರ್ಷಿಕೋತ್ಸವ ಪ್ರಯುಕ್ತ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಸಹಯೋಗ ದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರವು ಇತ್ತೀಚೆಗೆ ಕಲ್ಲಡ್ಕ ಸರಕಾರಿ ಶಾಲಾ ವಠಾರದಲ್ಲಿ ನಡೆಯಿತು.
ಎಸ್.ಡಿ.ಪಿ.ಐ. ಮಾಜಿ ಜಿಲ್ಲಾದ್ಯಕ್ಷ ಹನೀಫ್ ಖಾನ್ ಕೊಡಾಜೆ ಉದ್ಘಾಟಿಸಿದರು. ಬಂಟ್ವಾಳ ಎಪಿಎಂಸಿ ಅಧ್ಯಕ್ಷ ಕೆ. ಪದ್ಮನಾಭ ರೈ ಅಧ್ಯಕ್ಷತೆ ವಹಿಸಿದ್ದರು.
ಪಿಎಫ್.ಐ ಕಲ್ಲಡ್ಕ ಡಿವಿಷನ್ ಅಧ್ಯಕ್ಷ ಝಕರಿಯಾ ಗೋಳ್ತಮಜಲು, ಕಾಂಗ್ರೆಸ್ ಮುಖಂಡ ರಾಝಾ ಮೋನಾಕ, ಪಿಎಫ್.ಐ ಬಂಟ್ವಾಳ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಪನಾಮಾ, ಜೆಮ್ ಪಬ್ಲಿಕ್ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹಮೀದ್ ಅಲಿ, ಗೋಳ್ತಮಜಲು ಗ್ರಾಮ ಪಂಚಾಯತ್ ಸದಸ್ಯ ಯೂಸುಫ್ ಹೈದರ್, ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಉಮರುಲ್ ಫಾರೂಕ್, ಪ್ರಮುಖರಾದ ಸಫ್ವಾನ್ ಸಾಬಿತ್ ಅಜ್ಜಿಕಲ್, ಮುಆದ್ ಜಿ.ಎಂ., ಬ್ಲಡ್ ಹೆಲ್ತ್ ಲೈನ್ ನ ಅಜಯ್, ಸಲೀಂ ಮುರ, ಪತ್ರಕರ್ತ ಲತೀಫ್ ನೇರಳಕಟ್ಟೆ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ಸತತ 50 ಬಾರಿ ರಕ್ತದಾನ ಮಾಡಿದ ಸಮಾಜ ಸೇವಕ ಅಬ್ದುಲ್ ಹಕೀಂ ಕಲ್ಲಡ್ಕ ಅವರನ್ನು ಸನ್ಮಾನಿಸಲಾಯಿತು. ಟಿಪ್ಪುಸುಲ್ತಾನ್ ಯಂಗ್ ಮನ್ಸ್ ನ ಅದ್ಯಕ್ಷ ಅಶ್ರಫ್ ಅರಬಿ ಸ್ವಾಗತಿಸಿ, ವಂದಿಸಿದರು.