ವಿಧಾನಸಭೆ ಚುನಾವಣೆ: 5 ರಾಜ್ಯಗಳಲ್ಲಿ 19 ಮುಸ್ಲಿಂ ಅಭ್ಯರ್ಥಿಗಳ ಗೆಲುವು
ಹೊಸದಿಲ್ಲಿ,ಡಿ.13: ಇತ್ತೀಚೆಗೆ ಕೊನೆಯಾದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಹತ್ತೊಂಬತ್ತು ಮುಸ್ಲಿಂ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ತಲಾ ಎಂಟು ಮುಸ್ಲಿಂ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ ಮಧ್ಯ ಪ್ರದೇಶದಲ್ಲಿ ಎರಡು ಮತ್ತು ಛತ್ತೀಸ್‌ಗಡದಲ್ಲಿ ಓರ್ವ ಮುಸ್ಲಿಂ ಅಭ್ಯರ್ಥಿ ವಿಜಯಿಯಾಗಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಗೆದ್ದ 19 ಅಭ್ಯರ್ಥಿಗಳ ಪೈಕಿ ಹತ್ತು ಮಂದಿ ಕಾಂಗ್ರೆಸ್, ತಲಾ ಒಬ್ಬರು ಬಿಎಸ್‌ಪಿ ಮತ್ತು ಟಿಆರ್‌ಎಸ್ ಮತ್ತು ಏಳು ಎಐಎಂಐಎಂಗೆ ಸೇರಿದವರಾಗಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಕಣಕ್ಕಿಳಿಸಿದ್ದ ಏಳು ಮುಸ್ಲಿಂ ಅಭ್ಯರ್ಥಿಗಳು ಬಿಜೆಪಿಯ ಅಭ್ಯರ್ಥಿಗಳ ವಿರುದ್ಧ ಗೆಲುವು ಸಾಧಿಸಿದ್ದರೆ ಬಿಎಸ್‌ಪಿಯ ಮುಸ್ಲಿಂ ಅಭ್ಯರ್ಥಿ ಸಮಾಜವಾದಿ ಪಕ್ಷದ ಅಭ್ಯರ್ಥಿ ವಿರುದ್ಧ ಜಯ ಸಾಧಿಸಿದ್ದಾರೆ ಎಂದು ಆಯೋಗ ತಿಳಿಸಿದೆ.
Next Story