ಕಾರ್ಕಳ: ಶಬ್ಬೀರಿಯಾ ಅರೇಬಿಕ್ ಕಾಲೇಜಿನಲ್ಲಿ ವಿದ್ಯಾರ್ಥಿ ವೇತನ ವಿತರಣೆ

ಕಾರ್ಕಳ, ಡಿ. 14: ಶಬ್ಬೀರಿಯಾ ಅರೇಬಿಕ್ ಕಾಲೇಜಿನಲ್ಲಿ ಕಾರ್ಕಳ ಮಸ್ಕತ್ ಎಸೋಶಿಯೇಷನ್‍ನಿಂದ ಸುಮಾರು 25 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಸ್ಕತ್ ಎಸೊಶಿಯೇಷನ್ ನ ಅಧ್ಯಕ್ಷ ಅನ್ವರ್ ಹುಸೈನ್ ಪಟ್ನಿ ಮಾತನಾಡಿ ನಾವು ದೂರ ದೇಶದಲ್ಲಿ ದುಡಿದು ಸಂಪಾದನೆಯ ಒಂದಶವನ್ನು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸಕ್ಕಾಗಿ ನಾವು ನೀಡುತ್ತಿದ್ದೇವೆ ಈ ಹಣವನ್ನು ತಾವು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ನಂತರ ಮಾತನಾಡಿದ ಕಾರ್ಕಳ ಮುಸ್ಲಿಂ ಜಮಾತಿನ ಅಧ್ಯಕ್ಷರು ಹಾಗೂ ಪುರಸಭೆ ಸದಸ್ಯರಾದ ಆಶ್ಫಕ್ ಅಹಮ್ಮದ್ ಮಸ್ಕತ್ ವೆಲ್ ಫೆರ್ ಎಸೊಶೀಯೇಷನ್‍ರವರು ಈ ಕಾರ್ಯಕ್ರಮವನ್ನು 3 ವರ್ಷದಿಂದ ಮಾಡಿಕೊಂಡು ಬಂದಿದ್ದಾರೆ. ಕಾರ್ಕಳ ತಾಲೂಕಿನ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿಸಿ ಅಲ್ಲಿ ಕ್ರೋಢಿಕರಿಸಿದ ಮೊತ್ತವನ್ನು ತಮಗೆ ಹಂಚುತ್ತಿದ್ದಾರೆ. ನೀವು ಚೆನ್ನಾಗಿ ಕಲಿತು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದರೆ ಮಾತ್ರ ಅವರಿಗೆ ಸಂತೋಷವಾಗುತ್ತದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಘಟಕ ಅಧ್ಯಕ್ಷ ಅನ್ವರ್ ಹುಸೈನ್ ಪಟ್ನಿ ಶಬ್ಬೀರಿಯಾ ಅರೇಬಿಕ್ ಕಾಲೇಜನ ಆಡಳಿತ ನಿರ್ದೇಶಕ ಖಾಸಿಂ ಹಾಜಿ ಸೈಯದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ನಯಾಝ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.