ರಾಜ್ಯ ಕನ್ನಡ ಜಾನಪದ ಪರಿಷತ್‍ನಿಂದ ಡಾ.ಪಾಲ್ತಾಡಿರಿಗೆ ಸನ್ಮಾನ

ಪುತ್ತೂರು, ಡಿ.14: ಕರ್ನಾಟಕ ಜಾನಪದ ಅಕಾಡೆಮಿಯ 2018ನೇ ಸಾಲಿನ ಪ್ರತಿಷ್ಟಿತ ಜಾನಪದ ತಜ್ಞ ಪ್ರಶಸ್ತಿ ಪುರಸ್ಕೃತ, ಹಿರಿಯ ಜಾನಪದ ವಿದ್ವಾಂಸ, ರಾಜ್ಯ ತುಳು ಅಕಾಡಮಿಯ ಮಾಜಿ ಅಧ್ಯಕ್ಷ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರನ್ನು ರಾಜ್ಯ ಕನ್ನಡ ಜಾನಪದ ಪರಿಷತ್ ವತಿಯಿಂದ ಬೆದ್ರಾಳ ದಲ್ಲಿರುವ ಅವರ ಮನೆಯಲ್ಲಿ ಶುಕ್ರವಾರ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್‍ನ ರಾಜ್ಯಾಧ್ಯಕ್ಷ ಡಾ.ಎಸ್ ಬಾಲಾಜಿ, ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಕನ್ನಡ ಜಾನಪದ ಪರಿಷತ್‍ನ ದ.ಕ.ಜಿಲ್ಲಾಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ಜಯಂತ ವೈ ,ಪುತ್ತೂರು ತುಳುಕೂಟದ ಅಧ್ಯಕ್ಷ ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲು, ಬಾಳಿಲ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಯಾದ ಸಾಹಿತಿ ಚಂದ್ರಾವತಿ ರೈ ಪಾಲ್ತಾಡಿ, ಸುಮ ರಾಮಕೃಷ್ಣ ಆಚಾರ್, ಪೆರುವಾಜೆ ಶಿವರಾಮ ಕಾರಂತ ಮಹಾವಿದ್ಯಾಲಯದ ಸಮಾಜ ಕಾರ್ಯವಿಭಾಗ ಮುಖ್ಯಸ್ಥೆ ಸುಪ್ರಿಯಾ ,ರಂಗ ಕಲಾವಿದ ಸುಧಾಕರ ರೈ ಪಾಲ್ತಾಡಿ ಹೊಸಮನೆ ಉಪಸ್ಥಿತರಿದ್ದರು.
Next Story