ಉಡುಪಿ: ರಾಜ್ಯ ಹಣಕಾಸು ಸಂಸ್ಥೆಯಿಂದ ಸಾಲ ಯೋಜನೆಗಳು
ಉಡುಪಿ, ಡಿ.14: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ಉದ್ಯಮಿ ಗಳಿಗೆ ಈ ಕೆಳಕಂಡ ಉದ್ಯಮಿ ಸ್ನೇಹಿ ಯೋಜನೆಗಳು, ಕೈಗಾರಿಕೆ ಸ್ಥಾಪಿಸಲು/ ವಿಸ್ತರಿಸಲು/ವೈವಿದ್ದೀಕರಣ/ ನವೀಕರಣಕ್ಕಾಗಿ/ ತಾಂತ್ರಿಕ ಉನ್ನತೀಕರಣ ಹಾಗೂ ಉತ್ಪಾದನೆಗೆ ಪೂರಕವಾದ ಸೇವಾ ಚಟುವಟಿಕೆಗಳಲ್ಲಿ ತೊಡಗಿರುವ ಘಟಕಗಳಿಗೆ ಬಡ್ಡಿ ದರದಲ್ಲಿ ರಿಯಾುತಿ ಸಾಲ ಯೋಜನೆಗಳು ಚಾಲ್ತಿ ಯಲ್ಲಿವೆ.
ಈ ಸಾಲ ಯೋಜನೆಗಳು ಎಲ್ಲಾ ವರ್ಗದ ಉದ್ದಿಮೆದಾರರಿಗೆ, ಮಹಿಳಾ ಉದ್ಯಮಿಗಳಿಗೆ, ಪರಿಶಿಷ್ಟ ಜಾತಿ/ ಪಂಗಡಗಳ ಉದ್ಯಮಿಗಳಿಗೆ ಲಭ್ಯವಿರುತ್ತದೆ. ಉದ್ದಿಮೆದಾರರು ಈ ಸಾಲ ಯೋಜನೆಗಳ ಸದುಪಯೋಗ ಪಡೆಯುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಶಾಖಾ ಕಚೇರಿ ಉಡುಪಿ ಇವರನ್ನು ಸಂಪರ್ಕಿಸುವಂತೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಸಹಾಯಕ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story