ಎಸ್ಸೆಸ್ಸೆಫ್ ಬದ್ರಿಯಾ ನಗರ ಶಾಖೆಯ ಮಹಾಸಭೆ

ಕೊಣಾಜೆ, ಡಿ.13: ಎಸ್ಸೆಸ್ಸೆಫ್ ಕೊಣಾಜೆ ಸೆಕ್ಟರ್ ವ್ಯಾಪ್ತಿಯ ಬದ್ರಿಯಾ ನಗರ ಶಾಖೆಯ ಮಹಾಸಭೆಯು ಮಲಾರಿನ ಮಸ್ಜಿದುರ್ರಹ್ಮದಲ್ಲಿ ಇತ್ತೀಚೆಗೆ ನಡೆಯಿತು.
ಕೊಣಾಜೆ ಸೆಕ್ಟರ್ ನಾಯಕ ನೌಫಲ್ ಫರೀದ್ ನಗರ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಘಟಕದ 2018-19ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ತಸ್ಲೀಂ ನಡುಗುಡ್ಡೆ, ಪ್ರಧಾನ ಕಾರ್ಯದರ್ಶಿಯಾಗಿ ಜಬ್ಬಾರ್ ಬದ್ರಿಯಾ ನಗರ, ಕೋಶಾಧಿಕಾರಿಯಾಗಿ ಶರಫತ್ ಮಲಾರ್ ಪದವು, ಉಪಾಧ್ಯಕ್ಷರಾಗಿ ಇಸ್ಹಾಕ್ ನಡುಗಡ್ಡೆ, ನೌಫಲ್ ಬದ್ರಿಯಾ ನಗರ, ಕಾರ್ಯದರ್ಶಿಯಾಗಿ ರಿಯಾಝ್ ನಡುಗುಡ್ಡೆ, ರಫೀಖ್ ಬದ್ರಿಯಾ ನಗರ, ಕಾಲೇಜು ಕ್ಯಾಂಪಸ್ ಕನ್ವೀನರ್ ರಾಗಿ ಸಮದ್ ಬದ್ರಿಯಾ ನಗರ, ಎಸ್.ಬಿ.ಎಸ್. ಕನ್ವೀನರ್ ರಾಗಿ ಜುನೈದ್ ಬದ್ರಿಯಾ ನಗರ ಹಾಗೂ ಸೆಕ್ಟರ್ ಕೌನ್ಸಿಲರ್ ಗಳಾಗಿ ಹನ್ನೆರೆಡು ಮಂದಿಯನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸಲೀತ್, ಮಕ್ಸೂದ್, ಉಬೈದ್, ಮಿಫ್ತಾಹ್ ಮತ್ತಿತರು ಉಪಸ್ಥಿತರಿದ್ದರು. ನೌಫಲ್ ಬದ್ರಿಯಾ ನಗರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Next Story