Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಡಿ.18ರಂದು ಅನುಸ್ಮರಣಾ ಸಮ್ಮೇಳನ- ಕೇಸ್...

ಡಿ.18ರಂದು ಅನುಸ್ಮರಣಾ ಸಮ್ಮೇಳನ- ಕೇಸ್ ಡೈರಿ

ವಾರ್ತಾಭಾರತಿವಾರ್ತಾಭಾರತಿ15 Dec 2018 5:47 PM IST
share

ಮಂಗಳೂರು, ಡಿ.15: ಅರ್ಶದೀಸ್ ಅಸೋಸಿಯೇಶನ್ ವತಿಯಿಂದ ದ.ಕ. ಜಿಲ್ಲೆಯ ಮಹೋನ್ನತ ಖಾಝಿಗಳಾಗಿದ್ದ ಶೈಖುನಾ ಕೋಟ ಉಸ್ತಾದ್ ಹಾಗೂ ಸಿ.ಎಂ.ಉಸ್ತಾದ್ ಅವರ ಅನುಸ್ಮರಣೆ ಮತ್ತು ಸಮನ್ವಯ ವಿದ್ಯಾಭ್ಯಾಸ ಕೇಂದ್ರದ ಕುಲಪತಿಯಾಗಿದ್ದ ಸಿ.ಎಂ.ಉಸ್ತಾದರ ಅಸಹಜ ಸಾವು ಪ್ರಕರಣದ ಕೇಸ್ ಡೈರಿಯು ಡಿ.18ರಂದು ಬೆಳಗ್ಗೆ 10:30ಕ್ಕೆ ಬಂಟ್ವಾಳ ತಾಲೂಕಿನ ಮಾಣಿ ನೇರಳಕಟ್ಟೆ ಇಂಡಿಯನ್ ಆಡಿಟೋರಿಯಂನಲ್ಲಿ ಜರಗಲಿದೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅರ್ಶದೀಸ್ ಅಸೋಸಿಯೇಶನ್‌ನ ಹಾಗೂ ಕಾರ್ಯಕ್ರಮದ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ ಕೆ.ಯು. ಖಲೀಲ್ ರಹ್ಮಾನ್ ಅರ್ಶದಿ ಕೋಲ್ಪೆ, ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮಹಾ ಸಮ್ಮೇಳನವನ್ನು ಸಮಸ್ತ ಉಪಾಧ್ಯಕ್ಷ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ ಎಂದರು.

ಸಮಸ್ತ ಕರ್ನಾಟಕ ಮುಶಾವರ ಅಧ್ಯಕ್ಷ ಸೈಯದ್ ಝೈನುಲ್ ಆಬಿದೀನ್ ತಂಙಳ್ ದುಆಗೈಯಲಿದ್ದು, ಸೈಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ತಹ್ಲೀಲ್ ಸಮರ್ಪಣೆ ನಡೆಸಲಿದ್ದಾರೆ. ಹಸನ್ ಅರ್ಶದಿ ಬೆಳ್ಳಾರೆ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಕುರ್‌ಆನ್ ಪಂಡಿತ ರಹ್ಮತುಲ್ಲಾ ಖಾಸಿಮಿ ಮುತ್ತೇಡಂ, ಅಂತರರಾಷ್ಟ್ರೀಯ ವಾಗ್ಮಿ ಇಬ್ರಾಹೀಂ ಖಲೀಲ್ ಹುದವಿ, ನ್ಯಾಯವಾದಿ ಹನೀಫ್ ಹುದವಿ ದೇಲಂಪಾಡಿ ಮುಖ್ಯ ಪ್ರಭಾಷಣಗೈಯಲಿದ್ದಾರೆ. ಬೆಳಗ್ಗೆ 9:30ಕ್ಕೆ ನಡೆಯುವ ಅರ್ಶದಿ ಸಂಗಮದಲ್ಲಿ ಶೈಖುನಾ ಕೊಡುವಳ್ಳಿ ಉಸ್ತಾದ್ ಹಾಗೂ ಇಬ್ರಾಹೀಂ ಕುಟ್ಟಿ ದಾರಿಮಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಯು.ಎಂ.ಉಸ್ತಾದ್, ಝೈನುಲ್‌ ಆಬಿದೀನ್ ಜಿಫ್ರಿ ತಂಙಳ್, ಸೈಯದ್ ಅಮೀರ್ ತಂಙಳ್ ಕಿನ್ಯ, ಸಿ.ಕೆ.ಕೆ. ಮಾಣಿಯೂರ, ಮಾಜಿ ಸಚಿವ ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವ, ಅಬ್ದುಲ್ ರವೂಫ್ ಪುತ್ತಿಗೆ, ಬಿ.ಎಚ್.ಖಾದರ್ ಬಂಟ್ವಾಳ, ಮುಹಮ್ಮದ್ ಮಸೂದ್ ಹಾಜಿ, ಮಾಜಿ ಶಾಸಕ ಮೊಯ್ದಿನ್ ಬಾವ, ಬಿ.ಕೆ.ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಉಸ್ಮಾನುಲ್ ಫೈಝಿ, ಖಾಸಿಂ ದಾರಿಮಿ ಕಿನ್ಯ, ಅನೀಸ್ ಕೌಸರಿ, ಟಿ.ಎಂ.ಶಹೀದ್, ಮಾಜಿ ಮೇಯರ್ ಕೆ.ಅಶ್ರಫ್, ಜುನೈದ್ ಜಿಫ್ರಿ ತಂಙರ್ಳ ಆತೂರು, ಎಸ್.ಎಂ.ತಂಙಳ್ ಸಾಲ್ಮರ, ಶರಫುದ್ದೀನ್ ತಂಙಳ್ ಸಾಲ್ಮರ ಮತ್ತಿತರರು ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅರ್ಶದೀಸ್ ಅಸೋಸಿಯೇಶನ್‌ನ ಅಧ್ಯಕ್ಷ ಶರೀಫ್ ಅರ್ಶದಿ ಅಡ್ಡೂರ್, ಸ್ವಾಗತ ಸಮಿತಿಯ ಸಹ ಸಂಚಾಲಕ ಶರೀಫ್ ಅರ್ಶದಿ ಈಶ್ವರಮಂಗಲ, ಸದಸ್ಯ ಹಲೀಂ ಅರ್ಶದಿ ಮಲಾರ್, ತಸ್ಲೀಂ ಅರ್ಶದಿ ಅಮೆಮಾರ್ ಉಪಸ್ಥಿತರಿದ್ದರು.

‘ಉಸ್ತಾದ್ ನಿಗೂಢ ಸಾವು ಮರುತನಿಖೆಯಾಗಲಿ’

ಒಂಬತ್ತು ವರ್ಷಗಳ ಹಿಂದೆ ಕಾಣದ ಕೈಗಳು ಕೊಲೆ ಮಾಡಿರುವ ಸಿ.ಎಂ.ಉಸ್ತಾದ್ ನಿಗೂಢ ಸಾವಿನ ಪ್ರಕರಣ ಮರು ತನಿಖೆಯಾಗಬೇಕು. ಪ್ರಕರಣದ ರಹಸ್ಯ ಬಯಲಾಗಬೇಕು. ಸಿಬಿಐ ಆರೋಗ್ಯಕರ ತನಿಖೆ ನಡೆಸದೆ ಏಕಾಏಕಿ ಆತ್ಮಹತ್ಯೆ ಎಂದು ವರದಿ ಸಲ್ಲಿಸಿದೆ. ಕೇರಳ ಉಚ್ಚ ನ್ಯಾಯಾಲಯ ಪ್ರಕರಣವನ್ನು ತಳ್ಳಿ ಹಾಕಿದೆ. ಈ ಹಿನ್ನೆಲೆ ಜನಾಭಿಪ್ರಾಯಕ್ಕೆ ಸ್ಥಾನ ಕಲ್ಪಿಸಬೇಕು ಎಂದು ಸಮ್ಮೇಳನದಲಿ ಆಗ್ರಹಿಸಲಾಗುತ್ತದೆ. ಕಾಸರಗೋಡಿನಲ್ಲಿ 60 ದಿನಗಳಲ್ಲಿ ನಡೆದು ಬರುವ ಸಹಿ ಸಂಗ್ರಹ ಹಾಗೂ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಕೇರಳ ಸರಕಾರ ತಿರುಗಿ ನೋಡದೆ ಇರುವುದು ಖೇದಕರವಾಗಿದೆ ಎಂದು ಅರ್ಶದೀಸ್ ಅಸೋಸಿಯೇಶನ್‌ನ ಹಾಗೂ ಕಾರ್ಯಕ್ರಮದ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ ಕೆ.ಯು.ಖಲೀಲ್ ರಹ್ಮಾನ್ ಅರ್ಶದಿ ಕೋಲ್ಪೆ ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X