Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪ್ರಮುಖ ಸಂಸದೀಯ ಸಮಿತಿಗಳ ಅಧ್ಯಕ್ಷರು...

ಪ್ರಮುಖ ಸಂಸದೀಯ ಸಮಿತಿಗಳ ಅಧ್ಯಕ್ಷರು ಮುಜುಗರ ತರುತ್ತಿದ್ದಾರೆಂದು ಮೋದಿ ಸಿಡಿಮಿಡಿ

ಬ್ಯಾಂಕ್ ವಂಚಕರ ಪಟ್ಟಿ ಸೇರಿ ಗಂಭೀರ ವಿಷಯಗಳ ಬಗ್ಗೆ ವರದಿ

ಸ್ವಾತಿ ಚತುರ್ವೇದಿ, thewire.inಸ್ವಾತಿ ಚತುರ್ವೇದಿ, thewire.in15 Dec 2018 6:40 PM IST
share
ಪ್ರಮುಖ ಸಂಸದೀಯ ಸಮಿತಿಗಳ ಅಧ್ಯಕ್ಷರು ಮುಜುಗರ ತರುತ್ತಿದ್ದಾರೆಂದು ಮೋದಿ ಸಿಡಿಮಿಡಿ

ಬ್ಯಾಂಕ್ ಸಾಲ ವಂಚನೆಯಲ್ಲಿ ಶಾಮೀಲಾದ ದೊಡ್ಡ ವ್ಯಾಪಾರ ಕುಳಗಳ "ರಾಜನ್ ಪಟ್ಟಿ"ಯನ್ನು ಬಹಿರಂಗಗೊಳಿಸಿದರೆ ಎದುರಾಗಬಹುದಾದ ಸಂಭಾವ್ಯ ಪರಿಣಾಮದ ಬಗ್ಗೆ ಆತಂಕಿತರಾದ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನಡೆದ ಬಿಜೆಪಿ ಸಂಸದೀಯ ಕಾರ್ಯಕಾರಿಣಿ ಸಭೆಯಲ್ಲಿ ತಾಳ್ಮೆ ಕಳೆದುಕೊಂಡ ಘಟನೆ ವರದಿಯಾಗಿದೆ. ಪ್ರಮುಖ ಸಂಸದೀಯ ಸಮಿತಿಗಳ ಅಧ್ಯಕ್ಷರು ತಮ್ಮ ಸರ್ಕಾರಕ್ಕೆ ಪದೇ ಪದೇ ಮುಜುಗರ ತರುತ್ತಿದ್ದಾರೆಂದು ಮೋದಿ ಅಸಮಾಧಾನ ವ್ಯಕ್ತಪಡಿಸಿದರು.

ಭಾರತೀಯ ಜನತಾ ಪಕ್ಷದ ಸಂಸದೀಯ ಕಾರ್ಯಕಾರಿ ಮಂಡಳಿ ಸಭೆ ಡಿಸೆಂಬರ್ 10ರಂದು ಅಂದರೆ, ಬಿಜೆಪಿ ಮೂರು ಪ್ರಮುಖ ಹಿಂದಿ ರಾಜ್ಯಗಳ ಅಧಿಕಾರ ಕಳೆದುಕೊಳ್ಳುವ ಮುನ್ನಾ ದಿನ ನಡೆದಿತ್ತು. ಈ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಅಮಿತ್ ಶಾ, ಹಣಕಾಸು ಸಚಿವ ಅರುಣ್ ಜೇಟ್ಲಿ ಸೇರಿದಂತೆ ಹಲವು ಮಂದಿ ಹಿರಿಯ ಬಿಜೆಪಿ ಮುಖಂಡರು ಭಾಗವಹಿಸಿದ್ದರು.

ಈ ಶಾಸನಬದ್ಧ ಸಮಿತಿಗಳು ನಿಷ್ಪಕ್ಷಪಾತವಾಗಿದ್ದು, ಕೇವಲ ಸಂಸತ್ತಿಗೆ ಮಾತ್ರ ಉತ್ತರದಾಯಿತ್ವ ಹೊಂದಿರುತ್ತವೆ ಎಂಬ ಸಂವಿಧಾನ ಚೌಕಟ್ಟಿನ ಸ್ಪಷ್ಟ ಪರಿಚಯ ಮೋದಿ ಅವರಿಗೆ ಇದ್ದಂತಿಲ್ಲ. ಹಿರಿಯ ಬಿಜೆಪಿ ಮುಖಂಡ ಮುರಳಿಮನೋಹರ ಜೋಶಿ ನೇತೃತ್ವದ ಅಂದಾಜು ಸಮಿತಿ, ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕ ಸಮಿತಿ ಮತ್ತು ಬಿಜೆಪಿ ಮುತ್ಸದ್ಧಿ ಶಾಂತಕುಮಾರ್ ಮುಂದಾಳುತ್ವದ ಸಾರ್ವಜನಿಕ ಉದ್ದಿಮೆಗಳ ಸಮಿತಿಯ ಉಲ್ಲೇಖ ಸಂವಿಧಾನದಲ್ಲೇ ಇದ್ದು, ಸಮಿತಿಗಳ ಸ್ವಾಯತ್ತತೆ ಮತ್ತು ಇದರ ಕಾವಲು ಪಾತ್ರದ ಬಗ್ಗೆ ಸಂವಿಧಾನ ಸ್ಪಷ್ಟವಾಗಿ ಹೇಳಿದೆ.

ಆದರೆ ಬ್ಯಾಂಕ್ ಅನುತ್ಪಾದಕ ಆಸ್ತಿ ಪ್ರಕರಣಗಳಲ್ಲಿ ಷಾಮೀಲಾದ ಕೋಟ್ಯಧಿಪತಿಗಳ ರಾಜನ್ ಪಟ್ಟಿ, ಜಿಡಿಪಿ ಅಂಕಿ ಅಂಶಗಳ ಕಟ್ಟುಕಥೆ ಮತ್ತು ರಕ್ಷಣಾಪಡೆಗಳ ಸರ್ವಸನ್ನದ್ಧತೆಯ ಕೊರತೆಗೆ ಸಂಬಂಧಿಸಿದ ವಿವರ ಒಳಗೊಂಡ ವರದಿಗಳನ್ನು ಬಿಡುಗಡೆ ಮಾಡಿದಾಗ ಮೋದಿ ತಾಳ್ಮೆ ಕಳೆದುಕೊಂಡರು ಎನ್ನಲಾಗಿದೆ. ನವೀಕರಿಸಬಹುದಾದ ಇಂಧನಗಳ ಮೇಲೆ ವಿಧಿಸುವ ಸುಂಕವನ್ನು ಜಿಎಸ್‍ಟಿ ನಡಾವಳಿಗೆ ಅನುಗುಣವಾಗಿ ರಾಜ್ಯಗಳ ಜತೆ ಹಂಚಿಕೊಳ್ಳುವ ಪ್ರಸ್ತಾವಕ್ಕೆ ಇತ್ತೀಚೆಗೆ ಸಂಸದೀಯ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಸಂವಿಧಾನಾತ್ಮಕವಾಗಿ ಯಾವುದೇ ಇಂಥ ಸುಂಕವನ್ನು ಪ್ರತ್ಯೇಕ ಸರ್ಕಾರಿ ಖಾತೆಯಲ್ಲಿ ಇರಿಸಿ, ನಿಗದಿತ ಉದ್ದೇಶಕ್ಕೆ ಮಾತ್ರ ಬಳಸಬೇಕು.

ಅಚ್ಚರಿಯ ಸಂಗತಿಯೆಂದರೆ ಉಳಿದೆಲ್ಲ ಬಿಜೆಪಿ ನಾಯಕರು ಮೋದಿಯವರ ಸಿಟ್ಟಿಗೆ ಅಕ್ಷರಶಃ ಮೌನವಾಗಿದ್ದರು. ಸಂಸದೀಯ ವಿಧಿವಿಧಾನ ಮತ್ತು ನಡವಳಿಕೆಗಳ ಬಗ್ಗೆ ಅರಿವು ಹೊಂದಿರುವ, ಕಳೆದ ಕೆಲ ವರ್ಷಗಳಿಂದ ರಾಜ್ಯಸಭೆಯಲ್ಲಿ ಬಿಜೆಪಿ ನಾಯಕರಾಗಿರುವ ಅರುಣ್ ಜೇಟ್ಲಿ ಕೂಡಾ ತಮ್ಮ ನಾಯಕನ ವಿರುದ್ಧ ತಿರುಗಿ ಬೀಳಲಿಲ್ಲ.

ರೈಲ್ವೆ ಸಚಿವ ಪಿಯೂಶ್ ಗೋಯಲ್ ಮತ್ತು ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು, ಜೋಶಿಯವರನ್ನು ಕರೆಸಿ, ಸರ್ಕಾರದ ಬಗ್ಗೆ ಮೆದು ಧೋರಣೆ ಹೊಂದುವಂತೆ ಸೂಚಿಸಿದ್ದನ್ನು "ದ ವೈರ್" ಈ ಹಿಂದೆ ವರದಿ ಮಾಡಿತ್ತು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ದೀಪಾವಳಿ ಮುನ್ನ ಈ ಶಿಷ್ಟಾಚಾರದ ಭೇಟಿ ಎನ್ನಲಾದ ಬೇಟಿ ವಾಸ್ತವವಾಗಿ ಶಿಷ್ಟಾಚಾರದ ಉಲ್ಲಂಘನೆ ಎಂದೇ ವಿಶ್ಲೇಷಿಸಲಾಗುತ್ತಿದೆ. "ಉದಾಹರಣೆಗೆ ಮನಮೋಹನ್ ಸಿಂಗ್ ಅಧಿಕಾರಾವಧಿಯಲ್ಲಿ 2ಜಿ ಹಗರಣದ ಬಗೆಗಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾಗಿದ್ದ ಜೋಶಿಯವರನ್ನು ಸಚಿವರು ಖಾಸಗಿಯಾಗಿ ಭೇಟಿ ಮಾಡಿ ಸೂಚನೆ ನೀಡಿದ್ದರೆ ಪರಿಣಾಮ ಏನಾಗುತ್ತಿತ್ತು ಊಹಿಸಿಕೊಳ್ಳಿ" ಎಂದು ಸಂಸದರೊಬ್ಬರು ‘ದ ವೈರ್’ ಜತೆ ಮಾತನಾಡುತ್ತಾ ಹೇಳಿದ್ದರು.

ಸಂಸದೀಯ ಸಮಿತಿ ವರದಿಗಳು, ಅದರಲ್ಲೂ ಮುಖ್ಯವಾಗಿ ರಕ್ಷಣಾ ಸರ್ವಸನ್ನದ್ಧತೆ ಮತ್ತು ಜಿಡಿಪಿ ಬಗೆಗಿನ ವರದಿಗಳು ಪದೇ ಪದೇ ಮೋದಿ ಸರ್ಕಾರಕ್ಕೆ ಮುಜುಗರ ತಂದಿವೆ. ಅಂದಾಜು ಸಮಿತಿಯಂತೂ ಮೋದಿ ಸರ್ಕಾರದ ಪ್ರಮುಖ ಯೋಜನೆಗಳಾದ ಸ್ವಚ್ಛಭಾರತ ಹಾಗೂ ಗಂಗಾನದಿ ಸ್ವಚ್ಛತೆ ಯೋಜನೆಯ ಹುಳುಕುಗಳನ್ನು ಬಹಿರಂಗಗೊಳಿಸಿದೆ.

ಬಹುಶಃ ಅತಿದೊಡ್ಡ ಮುಜುಗರವೆಂದರೆ ರಾಜನ್ ಪಟ್ಟಿ. ಹಲವು ಮಂದಿ ಕೋಟ್ಯಧಿಪತಿ ಸುಸ್ತಿದಾರರ ವಿರುದ್ಧ ಪ್ರಧಾನಿ ಕಚೇರಿ ಸಂಯೋಜಿತ ತನಿಖೆಯನ್ನು ನಡೆಸುತ್ತಿಲ್ಲ ಎಂದು ನೇರವಾಗಿ ಪ್ರಧಾನಿ ಕಚೇರಿ ಮೇಲೆ ಈ ಪಟ್ಟಿ ಪ್ರಹಾರ ನಡೆಸಿದೆ.

ಸಂಸದೀಯ ಸಮಿತಿ ವರದಿಗೆ ಪ್ರತಿಕ್ರಿಯಿಸಿದ ರಾಜನ್ 17 ಪುಟಗಳ ಉತ್ತರವನ್ನು ಕಳುಹಿಸಿದ್ದು, ತಾವು ಈ ಬಗ್ಗೆ ಕ್ರಮಕ್ಕೆ ಸೂಚಿಸಿದ್ದಾಗಿ ಸಮರ್ಥಿಸಿಕೊಂಡಿದ್ದರು. ಆ ಬಳಿಕ ಸಂಸದೀಯ ಸಮಿತಿ ಪ್ರಧಾನಿ ಕಚೇರಿಗೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿಗೆ ಎರಡು ನೆನಪೋಲೆಗಳನ್ನು ಕಳುಹಿಸಿ, ರಾಜನ್ ಪಟ್ಟಿಯನ್ನು ಸಲ್ಲಿಸುವಂತೆ ನಿರ್ದೇಶನ ನೀಡಿತ್ತು. ಆದರೆ ಪ್ರಧಾನಿ ಕಚೇರಿ ಹಾಗೂ ಆರ್‍ಬಿಐ ಈ ಪಟ್ಟಿಯನ್ನು ನೀಡಲು ನಿರಾಕರಿಸಿದ್ದವು ಹಾಗೂ ಮೋದಿ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಮಾಹಿತಿಯನ್ನೂ ನೀಡಿರಲಿಲ್ಲ.

"ಸಾಂಸ್ಥಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಮೋದಿಯವರ ಸೊಕ್ಕು ಹಾಗೂ ನಿರ್ಲಕ್ಷ್ಯ ಹಿಂದೆಂದೂ ಕಂಡರಿಯದಂಥದ್ದು; ಯಾವ ಪ್ರಧಾನಿ ಕೂಡಾ ಸಂಸದೀಯ ಸಮಿತಿಗಳ ಮುಖ್ಯಸ್ಥರು ಸರ್ಕಾರದ ಅಧೀನದಲ್ಲಿರಬೇಕು ಎಂದು ಆಗ್ರಹಿಸಿರಲಿಲ್ಲ. ವಿಸ್ತೃತವಾದ ವರದಿಗಳಲ್ಲಿ ಸೂಚಿಸಲಾದ ಲೋಪಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಮೋದಿ, ಅದನ್ನು ಬಹಿರಂಗಪಡಿಸಿದ ಬಗ್ಗೆ ಸಿಟ್ಟಾದರು" ಎಂದು ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಈ ಸಮಿತಿಗಳು ಸ್ವಾಯತ್ತ ಹಾಗೂ ಕೇವಲ ಸಂಸತ್ತಿಗೆ ಮಾತ್ರ ಉತ್ತರದಾಯಿತ್ವ ಹೊಂದಿರುವಂಥವು ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿಯೊಬ್ಬರು ಸ್ಪಷ್ಟಪಡಿಸುತ್ತಾರೆ. "ಈ ಸಮಿತಿಗಳ ಅಧ್ಯಕ್ಷರ ಮೇಲೆ ಪ್ರಭಾವ ಬೀರಲು ಮೋದಿ ಸರ್ಕಾರ ಪ್ರಯತ್ನಿಸಿದರೆ ಅದು ತೀರಾ ಅಸಮಂಜಸ ಕ್ರಮವಾಗುತ್ತದೆ" ಎಂದು ಅವರು ಹೇಳುತ್ತಾರೆ.

ಎಪ್ಪತ್ತು ವರ್ಷಕ್ಕೂ ಹಳೆಯ ಆರ್‍ಬಿಐ ಸ್ವಾಯತ್ತತೆ ವಿಚಾರದಲ್ಲಿ ಮೋದಿ ಸರ್ಕಾರದ ಹಸ್ತಕ್ಷೇಪ ದೊಡ್ಡ ವಿವಾದ ಎಬ್ಬಿಸಿರುವ ನಡುವೆಯೇ ಸಂಸದೀಯ ಸಮಿತಿ ಅಧ್ಯಕ್ಷರ ವಿರುದ್ಧ ಮೋದಿ ಸಿಟ್ಟು ಹೊರಹಾಕಿದ್ದಾರೆ. ಊರ್ಜಿತ್ ಪಟೇಲ್ ಅವರು ಕೇಂದ್ರೀಯ ಬ್ಯಾಂಕಿನ ಸ್ವಾಯತ್ತತೆ ಬಲಿಕೊಡದೇ ತಮ್ಮ ಹುದ್ದೆಯನ್ನೇ ತೊರೆದರು. ಅಂತೆಯೇ ಮೋದಿ ಸರ್ಕಾರ ಮಧ್ಯರಾತ್ರಿಯ ಕ್ಷಿಪ್ರಕ್ರಾಂತಿಯಲ್ಲಿ, ರಫೇಲ್ ಒಪ್ಪಂದದ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನೂ ಪದಚ್ಯುತಗೊಳಿಸಿತ್ತು. ಅಂತೆಯೇ ಮಹತಿ ಹಕ್ಕು ಕಾಯ್ದೆಯ ಮೇಲೆ ಕೂಡಾ ಪದೇ ಪದೇ ಪ್ರಹಾರ ನಡೆಸುತ್ತಿರುವ ಮೋದಿ ಸರ್ಕಾರ ಇದರ ಆಶಯಕ್ಕೆ ತಣ್ಣೀರೆರಚಿದೆ.

ಮೋದಿ ಸರ್ಕಾರದ ಇತರ ಸಂಸದೀಯ ಅತಿಕ್ರಮಣಗಳಲ್ಲಿ ಪ್ರಮುಖವಾಗಿ, ಹಣಕಾಸು ಮಸೂದೆಯ ವ್ಯಾಖ್ಯೆಯನ್ನೇ ಬದಲಿಸಿ ರಾಜ್ಯಸಭೆಯಲ್ಲಿ ಆಧಾರ್ ಕಾಯ್ದೆಯ ಕರಡು ಮಸೂದೆ ಮೇಲಿನ ಪ್ರಮುಖ ಚರ್ಚೆಗೆ ಅವಕಾಶವನ್ನೇ ನಿರಾಕರಿಸಿದ ಕ್ರಮ ಕೂಡಾ ಸೇರಿದೆ. ಇದೀಗ ಹೊಸ ಶಕ್ತಿ ಪಡೆದಿರುವ ವಿರೋಧ ಪಕ್ಷಗಳು ಮುಂಬರುವ ಸಂಸತ್ ಅಧಿವೇಶನದಲ್ಲಿ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ ರಚನೆಗೆ ಒತ್ತಡ ಹಾಕುವ ಎಲ್ಲ ಸಾಧ್ಯತೆಗಳಿವೆ.

ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುವುದರೊಂದಿಗೆ, ವಿರೋಧ ಪಕ್ಷಗಳು ಹಾಗೂ ಆಡಳಿತ ಪಕ್ಷದೊಳಗೆಯೇ ಒಂದು ವರ್ಗ, ರಾಜನ್ ಪಟ್ಟಿ ಬಹಿರಂಗಗೊಳಿಸುವುದೂ ಸೇರಿದಂತೆ ಹಲವು ವಿಷಯಗಳಲ್ಲಿ ಮೋದಿ ಸರ್ಕಾರದ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಇದೆ. ಆರ್‍ಬಿಐ ಹೊಸ ಗವರ್ನರ್ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ರಾಜನ್ ಪಟ್ಟಿಗೆ ವಿಶೇಷ ಮಹತ್ವ ಬಂದಿದೆ. ಈ ಪಟ್ಟಿ ಪ್ರಧಾನಿ ಕಚೇರಿ ಹಾಗೂ ಆರ್‍ಬಿಐ ಬಳಿ ಇದ್ದು, ಮುರಳಿ ಮನೋಹರ ಜೋಶಿ ಪದೇ ಪದೇ ಇದಕ್ಕಾಗಿ ಆಗ್ರಹಿಸುತ್ತಲೇ ಇದ್ದಾರೆ.

share
ಸ್ವಾತಿ ಚತುರ್ವೇದಿ, thewire.in
ಸ್ವಾತಿ ಚತುರ್ವೇದಿ, thewire.in
Next Story
X