ಉಡುಪಿ: ಲಯನ್ಸ್ ಕ್ಲಬ್ ಪ್ರಾಂತೀಯ ಸಮ್ಮೇಳನ ‘ನೇಸರ’

ಉಡುಪಿ, ಡಿ.15: ಲಯನ್ಸ್ ಕ್ಲಬ್ ಜಿಲ್ಲೆ 317ಸಿ ಪ್ರಾಂತ್ಯ-1ರ ಪ್ರಾಂತೀಯ ಸಮ್ಮೇಳನ ‘ನೇಸರ’ವನ್ನು ಉಡುಪಿ ಮಿಶನ್ ಕಂಪೌಂಡಿನ ಬಾಸೆಲ್ ಮಿಶನ ರೀಸ್ ಮೆಮೋರಿಯಲ್ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಸಮ್ಮೇಳನವನ್ನು ಪ್ರಾಂತ್ಯದ ಪ್ರಥಮ ಮಹಿಳೆ ಲಯನ್ ಓಫಿಲಿಯಾ ಫಿಲೋಮೆನಾ ಕರ್ನೇಲಿಯೊ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಐವರು ಬಡ ವಿದ್ಯಾರ್ಥಿಗಳಿಗೆ ಲಾ್ಯಪ್‌ಟಾಪ್‌ಗಳನ್ನು ವಿತರಿಸಲಾಯಿತು.
ಉಡುಪಿ ಧರ್ಮಪ್ರಾಂತದ ಧರ್ಮಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ, ಲಯನ್ಸ್ ಜಿಲ್ಲೆ 317ಸಿ ಪ್ರಥಮ ಮಹಿಳೆ ಗಿರಿಜಾ ತಲ್ಲೂರ್ ಶಿವರಾಮ ಶೆಟ್ಟಿ, ಪ್ರೊ.ಕೃಷ್ಣೇಗೌಡ, ಜೆರಿ ವಿನ್ಸೆಂಟ್ ಡಾಯಸ್, ಪ್ರಾಂತ್ಯಾಧ್ಯಕ್ಷ ಡಾ.ನೇರಿ ಕರ್ನೆಲಿಯೋ, ಶ್ರೀಧರ ಶೇಣವ, ವಿ.ಜಿ ಶೆಟ್ಟಿ, ಎನ್.ಎಂ.ಹೆಗ್ಡೆ, ಸುನಿಲ್ ಕುಮಾರ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
Next Story