Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ತೇಜಸ್ ಜೆಟ್ ವಿಮಾನ ಪೂರೈಸಲು ಎಚ್‌ಎಎಲ್...

ತೇಜಸ್ ಜೆಟ್ ವಿಮಾನ ಪೂರೈಸಲು ಎಚ್‌ಎಎಲ್ ವಿಫಲ: ಖರ್ಗೆ ನೇತೃತ್ವದ ಸಂಸದೀಯ ಸಮಿತಿ ಕಳವಳ

ವಾರ್ತಾಭಾರತಿವಾರ್ತಾಭಾರತಿ15 Dec 2018 8:15 PM IST
share
ತೇಜಸ್ ಜೆಟ್ ವಿಮಾನ ಪೂರೈಸಲು ಎಚ್‌ಎಎಲ್ ವಿಫಲ: ಖರ್ಗೆ ನೇತೃತ್ವದ ಸಂಸದೀಯ ಸಮಿತಿ ಕಳವಳ

ಹೊಸದಿಲ್ಲಿ, ಡಿ.15: ವಾಯುಪಡೆಗೆ ಅಗತ್ಯವಿರುವಷ್ಟು ಪ್ರಮಾಣದ ತೇಜಸ್ ವಿಮಾನಗಳನ್ನು ಪೂರೈಸಲು ಹಿಂದುಸ್ತಾನ್ ಏರೊನಾಟಿಕ್ಸ್ ಸಂಸ್ಥೆ(ಎಚ್‌ಎಎಲ್) ವಿಫಲವಾಗಿರುವುದಕ್ಕೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಸಂಸದೀಯ ಸಮಿತಿ ತೀವ್ರ ಕಳವಳ ವ್ಯಕ್ತಪಡಿಸಿದೆ.

ಲಘು ಯುದ್ಧವಿಮಾನಗಳ ವಿನ್ಯಾಸ ಅಭಿವೃದ್ಧಿ, ಉತ್ಪಾದನೆ ಮತ್ತು ವಾಯುಪಡೆಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆಯಲ್ಲಿ ಭಾರೀ ವಿಳಂಬವಾಗಿದೆ ಎಂದು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಲಾದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ. ವಾಯುಪಡೆಗೆ ಅಗತ್ಯ ಸಂಖ್ಯೆಯ ವಿಮಾನಗಳನ್ನು ಪೂರೈಸುವಲ್ಲಿ ಎಚ್‌ಎಎಲ್ ಮತ್ತು ರಕ್ಷಣಾ ಇಲಾಖೆ ವಿಫಲವಾಗಿದ್ದು, ಇದರಿಂದ ವಾಯುಪಡೆಯ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ ಮತ್ತು ಭದ್ರತಾ ಬೆದರಿಕೆಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ. ಈ ವಿಳಂಬದಿಂದಾಗಿ ವಾಯುಪಡೆಯ ಎರಡು ಲಘು ಯುದ್ಧ ವಿಮಾನ ದಳಗಳ ಕಾರ್ಯಸಾಮರ್ಥ್ಯವನ್ನು ಕುಗ್ಗಿಸಿದೆ. ಈ ಹಿನ್ನೆಲೆಯಲ್ಲಿ 20,037 ಕೋಟಿ ರೂ. ವೆಚ್ಚ ಮಾಡಿ ಮಿಗ್ -ಬಿಐಎಸ್, ಮಿಗ್-29, ಮಿರಾಜ್-2000 ಹಾಗೂ ಜಾಗ್ವಾರ್ ವಿಮಾನಗಳನ್ನು ನವೀಕರಿಸಬೇಕಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತೇಜಸ್ ಸ್ಥಳೀಯವಾಗಿ ಉತ್ಪಾದನೆಯಾಗುವ ಏಕ ಇಂಜಿನ್‌ನ ಲಘು ಯುದ್ಧ ವಿಮಾನವಾಗಿದ್ದು, ಈ ವಿಮಾನಗಳನ್ನು ವಿನ್ಯಾಸಗೊಳಿಸಿ ಉತ್ಪಾದಿಸುವ ಗುತ್ತಿಗೆಯನ್ನು 1983ರಲ್ಲಿ ಎಚ್‌ಎಎಲ್‌ಗೆ ವಹಿಸಲಾಗಿದೆ. ಭಾರತೀಯ ವಾಯುಪಡೆಯಲ್ಲಿ ಯುದ್ಧವಿಮಾನದ ಕೊರತೆಯಿದ್ದು, 42 ಮಿಗ್-21 ವಿಮಾನಗಳು ಮಂಜೂರಾಗಿದ್ದರೂ ಈಗ 35 ವಿಮಾನ ಮಾತ್ರ ಇದೆ. ಮಿಗ್-21 ಮತ್ತು ಮಿಗ್-27 ವಿಮಾನಗಳು ಮುಂದಿನ 10 ವರ್ಷಗಳಲ್ಲಿ ವಾಯುಪಡೆಯಿಂದ ನಿರ್ಗಮಿಸಲಿವೆ ಎಂದು ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ. ಸಮಿತಿಯಲ್ಲಿ ಟಿಎಂಸಿ, ಶಿರೋಮಣಿ ಅಕಾಲಿದಳ, ಬಿಜು ಜನತಾ ದಳ, ಶಿವಸೇನೆ ಮತ್ತು ಬಿಜೆಪಿಯ 22 ಸದಸ್ಯರಿದ್ದಾರೆ(ರಾಜ್ಯಸಭೆ ಮತ್ತು ಲೋಕಸಭೆ ಸದಸ್ಯರು). ಅವಧಿ ಮುಗಿಯುವ ಹಂತದಲ್ಲಿರುವ ಮತ್ತು ಬಳಕೆಯಲ್ಲಿಲ್ಲದ ಮಿಗ್-21 ಮತ್ತು ಮಿಗ್-27 ವಿಮಾನಗಳ ಸ್ಥಾನದಲ್ಲಿ ಲಘು ಯುದ್ಧವಿಮಾನಗಳನ್ನು ಸೇರ್ಪಡೆಗೊಳಿಸಿ ವಾಯುಪಡೆಯ ಕನಿಷ್ಟ ಬಲವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ತೇಜಸ್ ವಿಮಾನಗಳನ್ನು ಉತ್ಪಾದಿಸಲಾಗುತ್ತಿದೆ. ಆದರೆ ಹಲವು ತಾಂತ್ರಿಕ ಕಾರಣಗಳಿಂದ ಈ ಯೋಜನೆ ವಿಳಂಬಗತಿಯಲ್ಲಿ ಸಾಗಿದೆ.

ಈ ಹಿನ್ನೆಲೆಯಲ್ಲಿ , ಇತರ ಯುದ್ಧವಿಮಾನಗಳಾದ ಅಮೆರಿಕದ ಎಫ್-16, ರಶ್ಯದ ಸುಕೊಯ್ ಎಸ್‌ಯು-30 ಮತ್ತು ಎಸ್‌ಯು-35, ಯುರೋಪ್‌ನ ಟೈಫೂನ್, ಸ್ವೀಡನ್‌ನ ಗ್ರಿಪೆನ್-ಇ, ಫ್ರಾನ್ಸ್‌ನ ರಫೇಲ್ ಇತ್ಯಾದಿ ವಿಮಾನಗಳ ಖರೀದಿಗೆ ಜಾಗತಿಕ ಮಾರಾಟಗಾರರಿಂದ ದರಪಟ್ಟಿಯನ್ನು ಸರಕಾರ ಆಹ್ವಾನಿಸಿದೆ ಎಂದು ವರದಿ ತಿಳಿಸಿದೆ. ಅಲ್ಲದೆ ವಾಯುಯಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಕೊರತೆಯಿಂದ ಸರಕಾರ ವಿದೇಶಗಳಿಂದ ಯುದ್ಧ ವಿಮಾನ ಹಾಗೂ ನಾಗರಿಕ ವಿಮಾನಗಳ ಖರೀದಿಗೆ ಸಾವಿರಾರು ಕೋಟಿ ರೂ. ಖರ್ಚು ಮಾಡಬೇಕಿದೆ. ಯುದ್ಧದ ಸಂದರ್ಭದಲ್ಲಿ ಮಿತ್ರನಲ್ಲದ ರಾಷ್ಟ್ರದಿಂದ ಯುದ್ಧವಿಮಾನ ಖರೀದಿಸುವುದು ಸುಲಭವಲ್ಲ ಎಂದು ವರದಿ ತಿಳಿಸಿದೆ.

   ವಾಯುಪಡೆ 200 ಯುದ್ಧವಿಮಾನಗಳಿಗೆ ಬೇಡಿಕೆ ಸಲ್ಲಿಸಿದ್ದರೆ 2018ರ ಜುಲೈನಲ್ಲಿ 9 ಯುದ್ಧವಿಮಾನ ಹಾಗೂ 20 ತರಬೇತಿ ವಿಮಾನ ಪೂರೈಸಲಾಗಿದೆ. ಅಲ್ಲದೆ ವಿಮಾನ ಅಭಿವೃಧ್ಧಿ ವಿಭಾಗ(ಎಡಿಎ) ಹಾಗೂ ಎಚ್‌ಎಎಲ್ ಇದುವರೆಗೂ ಕನಿಷ್ಟ ಒಬ್ಬ ವಿಮಾನ ಉತ್ಪಾದನಾ ತರಬೇತುದಾರರನ್ನೂ ಭಾರತೀಯ ವಾಯುಪಡೆಗೆ ಒದಗಿಸಿಲ್ಲ. ಆದ್ದರಿಂದ ಎಚ್‌ಎಎಲ್‌ಗೆ ವಾಯುಪಡೆಯ ಬೇಡಿಕೆಗೆ ಅನುಗುಣವಾಗಿ ತನ್ನ ಸಾಮರ್ಥ್ಯವನ್ನು ವರ್ಧಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಕಾರಣ ವಾಯುಪಡೆ ವಿದೇಶದ ವಿಮಾನಗಳನ್ನು ಅವಲಂಬಿಸಬೇಕಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X