ಜಾನಪದದಿಂದ ಸಂಸ್ಕೃತಿಯ ಬೆಸುಗೆ: ಡಾ.ಬಾಲಾಜಿ

ಉಡುಪಿ, ಡಿ.15: ಅಜ್ಞಾತ ಕವಿಗಳಿಂದ ರಚಿಸಲ್ಪಟ್ಟ ಅಮರ ಕಾವ್ಯಗಳೇ ‘ಜಾನಪದ’. ಜಾನಪದ ಕಲಾವಿದರಲ್ಲಿ ಪಾರಂಪರಿಕ ಜ್ಞಾನ ಇದೆ. ಈ ಕಲಾವಿದರ ಜ್ಞಾನವು ಗ್ರಾಮೀಣ ಪ್ರದೇಶಕ್ಕೆ ಮಾತ್ರ ಸೀಮಿತವಾಗದಂತೆ, ವಿವಿಧ ಅಕಾಡೆಮಿಗಳು ಕಲಾವಿದರಿಗೆ ನೆರವು ನೀಡಬೇಕು ಎಂದು ರಾಜ್ಯ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಹೇಳಿದ್ದಾರೆ.
ಶನಿವಾರ, ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಜಾನಪದ ಪರಿಷತ್‌ನ ಉಡುಪಿ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಕಾಡೆಮಿಗಳು ಬೆಂಗಳೂರಿಗೆ ಮಾತ್ರ ಸೀಮಿತಗೊಳ್ಳದೇ ರಾಜ್ಯದ ಮೂಲೆ ಮೂಲೆಗಳ ಗ್ರಾಮೀಣ ಪ್ರತಿಭೆಗಳು ತಮ್ಮ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು. ಪಾಶ್ಚಾತ್ಯ ಸಂಸ್ಕೃತಿ ಸಮಾಜವನ್ನು ಒಡೆಯಲು ಪ್ರೇರೇಪಿಸಿದರೆ, ನಮ್ಮ ಜಾನಪದ ಸಂಸ್ಕೃತಿ ಸಮಾಜವನ್ನು ಬೆಸೆಯುವ ಕಾರ್ಯ ಮಾಡುತ್ತದೆ ಎಂದವರು ನುಡಿದರು.
ಪಾಣಾರಾಟ ಮತ್ತು ಭೂತಕೋಲ ಕಲಾವಿದ ನಾಗರಾಜ ಪಾಣಾರ ಹಾಗೂ ಡಾ.ಎಸ್.ಬಾಲಾಜಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಭುಜಂಗ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್‌ನ ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ರಾಜ್ಯ ಯುವ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷ ಡಾ. ಪ್ರಶಾಂತ್ ಕುಮಾರ್, ಮುಖ್ಯ ಶಿಕ್ಷಕ ಮಾಧವ ಅಡಿಗ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ನರಸಿಂಹ ಗಾಣಿಗ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್‌ನ ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ರಾಜ್ಯ ಯುವ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಪರಿಷತ್‌ನ ಜಿಲ್ಲ್ಯಾಕ್ಷಡಾ.ಪ್ರಶಾಂತ್‌ಕುಮಾರ್,ಮುಖ್ಯಶಿಕ್ಷಕಮಾವ ಅಡಿಗ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ನರಸಿಂಹ ಗಾಣಿಗ ಉಪಸ್ಥಿತರಿದ್ದರು. ಕನ್ನಡ ಜಾನಪದ ಪರಿಷತ್‌ನ ಉಡುಪಿ ಜಿಲ್ಲಾ ಅಧ್ಯಕ್ಷ ಗಣೇಶ್ ಗಂಗೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.