ರಾಷ್ಟ್ರಮಟ್ಟದ ವಾಲಿಬಾಲ್ ತಂಡಕ್ಕೆ ಬಂಟ್ವಾಳದ ಶೌಕತ್ ಅಲಿ ಆಯ್ಕೆ

ಬಂಟ್ವಾಳ, ಡಿ. 15: ಛತ್ತೀಸ್‍ಗಢದಲ್ಲಿ ನಡೆಯುವ ಅಂಡರ್-19 ಜೂನಿಯರ್ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಪಾಣೆಮಂಗಳೂರು ನಿವಾಸಿ, ಉಜಿರೆ ಎಸ್‍ಡಿಎಂ ಕಾಲೇಜು ವಿದ್ಯಾರ್ಥಿ ಶೌಕತ್ ಅಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಶ್ರೀರಾಮನಹಳ್ಳಿ ಪ್ಯೂಪಲ್ ಟ್ರಸ್ಟ್ ಸರ್ವಿಸ್ ಸೆಂಟರ್ ನಲ್ಲಿ ನಡೆದ ತಂಡದ ಆಯ್ಕೆ ಕ್ಯಾಂಪ್‍ನಲ್ಲಿ ಶೌಕತ್ ಅಲಿ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಪಾಣೆಮಂಗಳೂರು ಎಸ್‍ಎಲ್‍ಎನ್‍ಪಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ತುಂಬೆ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಶೌಕತ್ ಅಲಿ, ಪ್ರಸ್ತುತ ಉಜಿರೆ ಎಸ್‍ಡಿಎಂ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ನಂದಾವರ ಅನ್ಸಾರಿಯಾ ವಾಲಿಬಾಲ್ ತಂಡದ ಉದಯೋನ್ಮುಖ ಆಟಗಾರನಾಗಿರುವ ಇವರು ಪಾಣೆಮಂಗಳೂರು ಸಮೀಪದ ನೆಹರೂನಗರ ನಿವಾಸಿ ಮುಹಮ್ಮದ್ ಹನೀಫ್ ಹಾಗೂ ಸಬೀನಾ ಬೇಗಂ ದಂಪತಿಯ ಪುತ್ರ.
Next Story