ಪುತ್ತೂರು : ದುರಸ್ತಿ ವೇಳೆಯಲಿ ವಿದ್ಯುತ್ ಹರಿದು ಇಬ್ಬರಿಗೆ ಗಾಯ

ಪುತ್ತೂರು, ಡಿ. 15 : ವಿದ್ಯುತ್ ಕಂಬವೇರಿ ದುರಸ್ತಿ ನಡೆಸುತ್ತಿದ್ದ ವೇಳೆಯಲ್ಲಿ ಇನ್ವರ್ಟರ್ ವಿದ್ಯುತ್ ಹರಿದ ಪರಿಣಾಮವಾಗಿ ಶಾಕ್ ಹೊಡೆದು ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ಶನಿವಾರ ಸಂಜೆ ಪುತ್ತೂರು ನಗರದಲ್ಲಿ ಸಂಭವಿಸಿದಿದೆ.
ನಂಜನಗೂಡು ತಾಲ್ಲೂಕಿನ ಕಸಿವಿನಹಳ್ಳಿ ಹೋಬಳಿಯ ಸೂರಳ್ಳಿ ಗ್ರಾಮದ ಹುಚ್ಚ ನಾಯಕ ಅವರ ಪುತ್ರ ಬಸವ ನಾಯಕ (30) ಮತ್ತು ಶಿವಣ್ಣ ನಾಯಕ ಅವರ ಪುತ್ರ ರವಿ (19) ಗಾಯಗೊಂಡವರು. ಗಾಯಾಳುಗಳ ಪೈಕಿ ಬಸವ ನಾಯಕ ಅವರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳಿಬ್ಬರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story