ಕುಂದಾಪುರ: ಹಝ್ರತ್ ಸುಲ್ತಾನ್ ಯೂಸುಫ್ ವಲಿಯುಲ್ಲಾಹಿ (ರ) ಉರೂಸ್ ಸಮಾರಂಭ

ಕುಂದಾಪುರ, ಡಿ. 15: ಇಲ್ಲಿನ ಹಝ್ರತ್ ಸುಲ್ತಾನ್ ಯೂಸುಫ್ ವಲಿಯುಲ್ಲಾಹಿ (ರ) ಅವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು ಸಮಾಪ್ತಿಗೊಂಡಿತು. ಕಾಸಿಂ ಕೋಯ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಉರೂಸ್ ಕಾರ್ಯಕ್ರಮದ ಪ್ರಯುಕ್ತ ಕೂಟ ಝಿಯಾರತ್ ,ಖುರ್ ಆನ್ ಪಾರಾಯಣ, ಧಾರ್ಮಿಕ ಪ್ರವಚನ, ಮೌಲಿದ್ ಪಾರಾಯಣ, ಸಂದಲ್ ಮೆರವಣಿಗೆ ನಡೆಯಿತು. ಹಲವು ತಂಡಗಳಿಂದ ವೈವಿಧ್ಯಮಯ ರೀತಿಯಲ್ಲಿ ನಡೆದ ದಫ್, ನಾತೇಶರೀಫ್, ಮಕ್ಕಳ ಸ್ಕೌಟ್ಸ್ ಗಳು ಮೆರವಣಿಗೆಗೆ ಇನ್ನಷ್ಟು ಮೆರುಗು ನೀಡಿತು.
ಅನೇಕ ಸಾದಾತುಗಳು, ಉಲಮಾಗಳು ಹಾಗೂ ಹಲವು ಗಣ್ಯರು ಭಾಗವಹಿಸಿದ್ದರು. ಕೊನೆಯಲ್ಲಿ ಅನ್ನದಾನ ವಿತರಣೆ ನಡೆಯಿತು.
Next Story