ಮಂಜನಾಡಿ: ಎಸ್ಸೆಸ್ಸೆಫ್ ಟೀಮ್ ಹಸನೈನ್ 'ಟ್ರೈನಿಂಗ್ ಕ್ಯಾಂಪ್ ಖಿಯಾದ-2018'

ಕೋಣಾಜೆ, ಡಿ. 16: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಟೀಮ್ ಹಸನೈನ್ ಟ್ರೈನಿಂಗ್ ಕ್ಯಾಂಪ್ ಖಿಯಾದ-2018 ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮೌಲಾನಾ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ಅಧ್ಯಕ್ಷತೆಯಲ್ಲಿ ಅಲ್- ಮದೀನಾ ಕ್ಯಾಂಪಸ್ ಮಂಜನಾಡಿಯಲ್ಲಿ ನಡೆಯಿತು.
ಅಲ್-ಮದೀನಾ ಮದರಿಸ್ ಮಹಮ್ಮದ್ ಕುಂಞಿ ಅಂಜದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮೌಲಾನಾ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ಹಾಗೂ ರಾಜ್ಯ ಕೋಶಾಧಿಕಾರಿ ಶರೀಫ್ ಮಾಸ್ಟರ್ ಬೆಂಗಳೂರು ತರಗತಿಯನ್ನು ನಡೆಸಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಮುನ್ನುಡಿ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಮಂಗಳೂರು ಡಿವಿಷನ್ ಅಧ್ಯಕ್ಷ ಜುನೈದ್ ಸ ಅದಿ ವಳವೂರು, ಉಳ್ಳಾಲ ಡಿವಿಷನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ, ಸುಳ್ಯ ಡಿವಿಷನ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಂಜದಿ ಸುಳ್ಯ, ಕೆ.ಐ.ಅಯ್ಯೂಬ್ ಮಹ್ಲರಿ ಬೆಳ್ತಂಗಡಿ, ಇಸಾಕ್ ಮದನಿ ಉಪ್ಪಿನಂಗಡಿ, ಅಬೂಬಕ್ಜರ್ ಸಖಾಫಿ ಹಿಮಮಿ ವಿಟ್ಲ, ಅಬೂಬಕ್ಕರ್ ಸಿದ್ದೀಕ್ ಮಿಸ್ಬಾಹಿ ಕರೋಪಾಡಿ, ಅಕ್ಬರ್ ಮದನಿ ನಂದಾವರ, ಜುನೈದ್ ಮುಈನಿ ಬೆಳ್ಮ, ನವಾಝ್ ಸಖಾಫಿ ಅಡ್ಯಾರ್ ,ಉಳ್ಳಾಲ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ,ಇರ್ಶಾದ್ ಗೂಡಿನಬಳಿ,ಹಸೈನಾರ್ ಗುತ್ತಿಗಾರ್,ಸಿದ್ದೀಕ್ ಮೂಡಬಿದ್ರೆ, ಹಮೀದ್ ನಾಟೆಕಲ್ ಹಾಗೂ ಇನ್ನಿತರ ಉಲಮಾ, ಸಂಘಟನಾ ನಾಯಕರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಟೀಮ್ ಹಸನೈನ್ ರಾಜ್ಯ ಉಸ್ತುವಾರಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಸ್ವಾಗತಿಸಿ, ಕೊನೆಗೆ ವಂದಿಸಿದರು.