ಸಂವಿಧಾನ ಉಳಿವಿಗಾಗಿ ಯುವಕರು ಸಂಘಟಿತರಾಗಿ: ಸೈಯದ್ ಶಿಹಾಬ್ ತಂಙಳ್

ಮಂಗಳೂರು, ಡಿ. 16: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಇದರ ಯುವ ಜನ ಸಂಘ ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತರ ಸಮಾವೇಶದಲ್ಲಿ ಮುಸ್ಲಿಂ ಯೂತ್ ಲೀಗ್ ರಾಷ್ಟ್ರೀಯ ಉಪಾಧ್ಯಕ್ಷರು, ಕರ್ನಾಟಕ ಉಸ್ತುವಾರಿಯು ಆದ ಪಾಣಕ್ಕಾಡ್ ಸೈಯದ್ ಮುಈನಲಿ ಶಿಹಾಬ್ ತಂಙಳ್ ಮಾತನಾಡಿ ಕೋಮುವಾದಿ ಪಕ್ಷಗಳನ್ನು ದೂರವಿಡಲು ಯುವಕರು ಜಾತ್ಯತೀತ ನಿಲುವನಿಟ್ಟು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕಾಗಿ ಕರೆ ನೀಡಿದರು.
ಅವರು ಮುಸ್ಲಿಂ ಯೂತ್ ಲೀಗ್ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕಳೆದ 70 ವರ್ಷಗಳಿಂದ ಜಾತ್ಯತೀತ ಸಿದ್ಧಾಂತಗಳನ್ನು ಒಳಗೊಂಡು ಭಾರತದ ಸಂವಿಧಾನಕ್ಕೆ ಧಕ್ಕೆಯಾಗ ದಂತೆ ಕಾರ್ಯನಿರ್ವಹಿಸಿದ ರಾಜಕೀಯ ಪಕ್ಷವಾಗಿದೆ. ಅಲ್ಪಸಂಖ್ಯಾತ ಕೋಮುವಾದವು ರಾಷ್ಟ್ರದ ಉನ್ನತಿಗೆ ಮತ್ತು ಸೌಹಾರ್ದತೆಗೆ ದಜ್ಕೆಯಾಗಲಿದೆ ಆದ್ದರಿಂದ ಯುವಕರು ಮುಸ್ಲಿಂ ಯೂತ್ ಲೀಗಿನ ಕಾರ್ಯಕರ್ತರಾಗಿ ರಾಷ್ಟ್ರದ ಬೆಳವಣಿಗೆ ಹಾಗೂ ಸೌಹಾರ್ದತೆ ಬೇಕಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ಸಮಾವೇಶದಲ್ಲಿ ದ.ಕ ಜಿಲ್ಲೆಯ ಎಲ್ಲಾ ಭಾಗಗಳಲ್ಲಿಯೂ ಸಂಘಟನೆಯನ್ನು ಶಕ್ತಿ ಪಡಿಸಲು 10 ಜನರ ಸಮೀತಿಯನ್ನು ರಚಿಸಲಾಯಿತು. ಈ ಸಂದರ್ಭದಲ್ಲಿ ಪಾಣಕ್ಕಾಡ್ ಮುಈನ್ ಅಲಿ ಶಿಹಾಬ್ ತಂಙಳ್ ರಿಗೆ ಸನ್ಮಾನಿಸಲಾಯಿತು.





