Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಿಮ್ಮ ಆಧಾರ್ ಕಾರ್ಡ್...

ನಿಮ್ಮ ಆಧಾರ್ ಕಾರ್ಡ್ ಕಳೆದುಕೊಂಡಿದ್ದೀರಾ? ಚಿಂತಿಸಬೇಡಿ

ಈ ವಿಧಾನ ಅನುಸರಿಸಿ, ಹೊಸ ಕಾರ್ಡ್ ಪಡೆಯಿರಿ

ವಾರ್ತಾಭಾರತಿವಾರ್ತಾಭಾರತಿ16 Dec 2018 6:15 PM IST
share
ನಿಮ್ಮ ಆಧಾರ್ ಕಾರ್ಡ್ ಕಳೆದುಕೊಂಡಿದ್ದೀರಾ? ಚಿಂತಿಸಬೇಡಿ

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ವು ತನ್ನ ಜಾಲತಾಣದಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಹೊಸ ಸೇವೆಯೊಂದನ್ನು ಆರಂಭಿಸಿದೆ. ಇದರ ಮೂಲಕ ಜನರು ನಾಮಮಾತ್ರ ಶುಲ್ಕವನ್ನು ಪಾವತಿಸಿ ತಮ್ಮ ಆಧಾರ್ ಕಾರ್ಡ್‌ನ ಮರುಮುದ್ರಣಕ್ಕೆ ಬೇಡಿಕೆ ಸಲ್ಲಿಸಬಹುದು. ತಮ್ಮ ಆಧಾರ್ ಕಾರ್ಡ್‌ಗಳನ್ನು ಕಳೆದುಕೊಂಡಿರುವ ಮತ್ತು ಅನಿವಾರ್ಯವಾಗಿ ಯುಐಎಡಿಐ ಜಾಲತಾಣದಿಂದ ಆಧಾರ್ ಕಾರ್ಡ್‌ನ ಇ-ಆವೃತ್ತಿಯನ್ನು ಬಳಸುತ್ತಿರುವವರಿಗೆ ಈ ಸೇವೆಯಿಂದ ಉಪಯೋಗವಾಗಲಿದೆ.

ಈ ಮೊದಲು ನೀವು ಆಧಾರ್ ಕಾರ್ಡ್ ಕಳೆದುಕೊಂಡಿದ್ದರೆ ಅದನ್ನು ಮರುಮುದ್ರಿಸಿಕೊಳ್ಳಲು ಸಾಧ್ಯವಿಲ್ಲವಾಗಿತ್ತು. ನೀವು ಯುಐಡಿಎಐ ಜಾಲತಾಣದಿಂದ ಇ-ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಂಡು ಅದನ್ನು ನಿಮ್ಮ ಗುರುತಿನ ಪುರಾವೆಯಾಗಿ ಸಲ್ಲಿಸಬೇಕಿತ್ತು. ಆದರೆ ಈಗ ಜಿಎಸ್‌ಟಿ ಮತ್ತು ಸ್ಪೀಡ್ ಪೋಸ್ಟ್ ಶುಲ್ಕ ಸೇರಿದಂತೆ ಕೇವಲ 50 ರೂ.ಗಳನ್ನು ಪಾವತಿಸುವ ಮೂಲಕ ಆಧಾರ್ ಕಾರ್ಡ್‌ನ ಮರುಮುದ್ರಣವನ್ನು ಪಡೆದುಕೊಳ್ಳಬಹುದಾಗಿದೆ. ಇದನ್ನು ಯುಐಎಡಿಐ ಐದು ದಿನಗಳಲ್ಲಿ ಸ್ಪೀಡ್ ಪೋಸ್ಟ್ ಮೂಲಕ ನಿಮ್ಮ ನೋಂದಾಯಿತ ವಿಳಾಸಕ್ಕೆ ತಲುಪಿಸುತ್ತದೆ.

ಆಧಾರ್ ಕಾರ್ಡ್ ಮರುಮುದ್ರಣಕ್ಕೆ ಬೇಡಿಕೆಯನ್ನು ಸಲ್ಲಿಸಲು ನೀವು ನಿಮ್ಮ ಆಧಾರ್ ಸಂಖ್ಯೆ ಅಥವಾ ವರ್ಚ್ಯುವಲ್ ಐಡೆಂಟಿಫಿಕೇಷನ್ ನಂಬರ್(ವಿಐಡಿ)ನ್ನು ಬಳಸಬಹುದು.

ಆಧಾರ್ ಕಾರ್ಡ್ ಮರುಮುದ್ರಣಕ್ಕೆ ಬೇಡಿಕೆ ಸಲ್ಲಿಸಿದಾಗ ನಿಮ್ಮ ಮೊಬೈಲ್‌ಗೆ ಒಂದು ಬಾರಿಯ ಪಾಸ್‌ವರ್ಡ್(ಒಟಿಪಿ)ನ್ನು ಕಳುಹಿಸಲಾಗುವುದರಿಂದ ನಿಮ್ಮ ಮೊಬೈಲ್ ಸಂಖ್ಯೆಯು ಆಧಾರ್ ದತ್ತಾಂಶ ಕೋಶದಲ್ಲಿ ನೋಂದಣಿಯಾಗಿರಬೇಕು. ಆದರೆ ನಿಮ್ಮ ಮೊಬೈಲ್ ಸಂಖ್ಯೆಯು ಆಧಾರ್‌ನೊಂದಿಗೆ ನೋಂದಣಿಯಾಗಿರದಿದ್ದರೆ ನೀವು ನೋಂದಣಿಯಾಗಿರದ ಮೊಬೈಲ್ ಸಂಖ್ಯೆಯ ಮೂಲಕ ಆಧಾರ್ ಕಾರ್ಡ್‌ನ ಮರುಮುದ್ರಣವನ್ನು ಮಾಡಿಸಿಕೊಳ್ಳಬಹುದು,ಆದರೆ ನಿಮ್ಮ ವಿವರಗಳ ಮುನ್ನೋಟ ಸಾಧ್ಯವಾಗುವುದಿಲ್ಲ.

ನಿಮ್ಮ ಆಧಾರ್ ಕಾರ್ಡ್‌ನ ಮರುಮುದ್ರಣಕ್ಕಾಗಿ ಅನುಸರಿಸಬೇಕಾದ ಕ್ರಮಗಳು ಹೀಗಿವೆ......

1) ಯುಐಡಿಎಐನ ಜಾಲತಾಣ www.uidai.gov.in ಗೆ ಭೇಟಿ ನೀಡಿ.

2) ಆಧಾರ್ ಸೇವೆಗಳಡಿ ‘ಆರ್ಡರ್ ಆಧಾರ್ ರಿಪ್ರಿಂಟ್(ಪೈಲಟ್ ಬೇಸಿಸ್)’ನ್ನು ಕ್ಲಿಕ್ ಮಾಡಿ.

3) ಈಗ ನಿಮ್ಮ ಕಂಪ್ಯೂಟರ್ ಪರದೆಯಲ್ಲಿ ಹೊಸಪುಟವೊಂದು ತೆರೆದುಕೊಳ್ಳುತ್ತದೆ. ನೀವು ನಿಮ್ಮ 12 ಅಂಕಿಗಳ ಆಧಾರ್ ಸಂಖ್ಯೆ ಅಥವಾ 16 ಅಂಕಿಗಳ ವಿಐಡಿ ನಂಬರ್ ಮತ್ತು ಸೆಕ್ಯೂರಿಟಿ ಕೋಡ್‌ನ್ನು ಬರೆಯಬೇಕಾಗುತ್ತದೆ. ನಿಮ್ಮ ಮೊಬೈಲ್ ಸಂಖ್ಯೆಯು ಆಧಾರ್‌ನೊಂದಿಗೆ ನೋಂದಣಿಯಾಗಿರದಿದ್ದರೆ ಇದನ್ನು ಸೂಚಿಸುವ ಬಾಕ್ಸ್‌ನ್ನು ಆಯ್ಕೆ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆಯು ನೋಂದಾಯಿತವಾಗಿದ್ದರೆ ‘ಸೆಂಡ್ ಒಟಿಪಿ’ಯನ್ನು ಕ್ಲಿಕ್ ಮಾಡಿ.

4) ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿಯನ್ನು ಕಳುಹಿಸಲಾಗುತ್ತದೆ. ಈ ಒಟಿಪಿಯು ಕೇವಲ 10 ನಿಮಿಷಗಳ ಗಡುವನ್ನು ಹೊಂದಿರುತ್ತದೆ ಎನ್ನುವುದು ನೆನಪಿರಲಿ.

5) ಈಗ ಓಟಿಪಿಯನ್ನು ಬರೆದು ‘ಟರ್ಮ್ಸ್ ಆ್ಯಂಡ್ ಕಂಡಿಷನ್ಸ್’ಗೆ ಒಪ್ಪಿಗೆ ಸೂಚಿಸುವ ಬಾಕ್ಸ್‌ನ್ನು ಆಯ್ಕೆ ಮಾಡಿ.

6) ನೀವು ಒಟಿಪಿಯನ್ನು ಸರಿಯಾಗಿ ದಾಖಲಿಸಿದ್ದರೆ ನೀವು ನಿಮ್ಮ ಆಧಾರ್ ವಿವರಗಳನ್ನು ಪರಿಶೀಲಿಸಬಹುದಾಗಿದೆ (ನಿಮ್ಮ ಮೊಬೈಲ್ ಸಂಖ್ಯೆ ನೋಂದಾಯಿತವಾಗಿದ್ದರೆ ಮಾತ್ರ). ಈ ವಿವರಗಳಲ್ಲಿ ತಪ್ಪುಗಳಿದ್ದರೆ ಅಥವಾ ವಿವರಗಳು ಬಿಟ್ಟುಹೋಗಿದ್ದರೆ ನೀವು ಹತ್ತಿರದ ಆಧಾರ್ ಸೇವಾ ಕೆಂದ್ರಕ್ಕೆ ಭೇಟಿ ನೀಡಿ ಅದನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ.

7) ಆಧಾರ್ ವಿವರಗಳನ್ನು ದೃಢಪಡಿಸಿಕೊಂಡ ಬಳಿಕ ‘ಮೇಕ್ ಪೇಮೆಂಟ್’ ಆಯ್ಕೆಯನ್ನು ಕ್ಲಿಕ್ಕಿಸಿ. ಅದು ನಿಮ್ಮನ್ನು ‘ಪೇಮೆಂಟ್ ಗೇಟ್‌ವೇ’ಗೆ ಕರೆದೊಯ್ಯುತ್ತದೆ.

8) ನಿಮ್ಮ ಅನುಕೂಲಕ್ಕೆ ತಕ್ಕಂತೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್,ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಮೂಲಕ ನೀವು 50 ರೂ.ಶುಲ್ಕವನ್ನು ಪಾವತಿಸಬಹುದು. ಹಣಪಾವತಿಯ ವಿವರಗಳನ್ನು ಸಲ್ಲಿಸಿದ ಬಳಿಕ ‘ಪೇ ನೌ’ಅನ್ನು ಕ್ಲಿಕ್ಕಿಸಿ.

9) ಯಶಸ್ವಿಯಾಗಿ ಹಣ ಪಾವತಿಯಾದ ಬಳಿಕ ನಿಮ್ಮ ಪರದೆಯ ಮೇಲೆ ಹಿಂಬರಹ ಕಾಣಿಸಿಕೊಳ್ಳುತ್ತದೆ. ಈ ಪಾವತಿಯನ್ನು ನೀವು ಡೌನ್‌ಲೋಡ್ ಕೂಡ ಮಾಡಿಕೊಳ್ಳಬಹುದು. ಸರ್ವಿಸ್ ರಿಕ್ವೆಸ್ಟ್ ನಂಬರ್(ಎಸ್‌ಆರ್‌ಎನ್)ನೊಂದಿಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸಂದೇಶವೊಂದನ್ನು ಕಳುಹಿಸಲಾಗುತ್ತದೆ.

ನಿಮ್ಮ ಮೊಬೈಲ್ ಸಂಖ್ಯೆ ಆಧಾರ್‌ನೊಂದಿಗೆ ನೋಂದಣಿಯಾಗಿರದಿದ್ದರೆ ಮೇಲ್ಕಾಣಿಸಿದ ಕ್ರಮ 3ರಲ್ಲಿ ಇದನ್ನು ಸೂಚಿಸುವ ಬಾಕ್ಸ್‌ನ್ನು ಗುರುತು ಮಾಡಿ. ನೀವು ಪರ್ಯಾಯ/ನೋಂದಾಯಿತವಲ್ಲದ ಮೊಬೈಲ್ ಸಂಖ್ಯೆಯನ್ನು ಸಲ್ಲಿಸಬೇಕಾಗುತ್ತದೆ ಮತ್ತು ಒಟಿಪಿಯನ್ನು ಕ್ಲಿಕ್ ಮಾಡಿ. ಈ ಪರ್ಯಾಯ ಸಂಖ್ಯೆಗೆ ಒಟಿಪಿಯನ್ನು ಕಳುಹಿಸಲಾಗುತ್ತದೆ. ಆದರೆ ಹಣ ಪಾವತಿಸುವ ಮುನ್ನ ನಿಮ್ಮ ಆಧಾರ್ ವಿವರಗಳನ್ನು ಪರಿಶೀಲಿಸಿ ದೃಢಪಡಿಸಿಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲ.

ಮರುಮುದ್ರಣ ಪ್ರಕ್ರಿಯೆಯ ಸ್ಥಿತಿಗತಿ ತಿಳಿದುಕೊಳ್ಳುವುದು ಹೇಗೆ?

ಆಧಾರ್ ಕಾರ್ಡ್ ನಿಮಗೆ ರವಾನೆಯಾಗುವವರೆಗೆ ನಿಮ್ಮ ಕೋರಿಕೆಯ ಸ್ಥಿತಿಗತಿಯನ್ನು ನೀವು ತಿಳಿದುಕೊಳ್ಳಬಹುದು.

1) https://resident.uidai.gov.in/check-aadhaar-reprint ಗೆ ಭೇಟಿ ನೀಡಿ.

2) ನೀವು ನಿಮ್ಮ ಮೊಬೈಲ್‌ನಲ್ಲಿ ಸ್ವೀಕರಿಸಿರುವ 28 ಅಂಕಿಗಳ ಎಸ್‌ಆರ್‌ಎನ್ ಕೋಡ್‌ನ್ನು ಎಂಟರ್ ಮಾಡಿ.

3) 12 ಅಂಕಿಗಳ ಆಧಾರ್ ಸಂಖ್ಯೆಯನ್ನು ಎಂಟರ್ ಮಾಡಿ.

4) ಸೆಕ್ಯೂರಿಟಿ ಕೋಡ್‌ನ್ನು ಎಂಟರ್ ಮಾಡಿ ಮತ್ತು ‘ಸಬ್‌ಮಿಟ್’ ಅನ್ನು ಕ್ಲಿಕ್ಕಿಸಿ.

ನೀವು ಒದಗಿಸಿರುವ ವಿವರಗಳು ಸರಿಯಾಗಿದ್ದರೆ ನಿಮ್ಮ ಕೋರಿಕೆಯ ಸ್ಥಿತಿಗತಿ ಕಂಪ್ಯೂಟರ್ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X