ಸಿಎಂ ಕುಮಾರಸ್ವಾಮಿ ಹುಟ್ಟುಹಬ್ಬ: ಕುದ್ರೊಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಮಂಗಳೂರು, ಡಿ.16: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯ 59ನೇ ಹುಟ್ಟುಹಬ್ಬವನ್ನು ದ.ಕ. ಜಿಲ್ಲಾ ಯುವ ಜನತಾ ದಳ ಅಧ್ಯಕ್ಷ ಅಕ್ಷಿತ್ ಸುವರ್ಣರ ನೇತೃತ್ವದಲ್ಲಿ ಕುದ್ರೊಳಿ ಶ್ರೀ ಗೊಕರ್ಣನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯೊಂದಿಗೆ ರವಿವಾರ ಆಚರಿಸಲಾಯಿತು.
ಈ ಸಂದರ್ಭ ಜಿಲ್ಲೆಯ ಯುವ ಕಾರ್ಯದರ್ಶಿ ಮುಹಮ್ಮದ್ ಫೈಝಲ್, ಮಂಗಳೂರು ಉತ್ತರ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಭರತ್ ಜಿ. ಹೆಗ್ಡೆ, ಅಧ್ಯಕ್ಷ ರತೀಶ್ ಕರ್ಕೇರ, ಲಿಕಿತ್ ಅಂಚನ್, ಹಿತೇಶ್ ರೈ, ವಿದ್ಯಾರ್ಥಿ ಜನತಾದಳ ಅಧ್ಯಕ್ಷ ಸಿನಾನ್ ಮತ್ತಿತರರಿದ್ದರು.
Next Story