ಮಂಗಳೂರು: ರಾಮಕೃಷ್ಣ ಮಿಷನ್‌ನ 5ನೇ ಹಂತದ ಸ್ವಚ್ಛತಾ ಅಭಿಯಾನ

ಮಂಗಳೂರು, ಡಿ.16: ರಾಮಕೃಷ್ಣ ಮಿಷನ್ ಹಮ್ಮಿಕೊಂಡಿರುವ 5ನೆ ಹಂತದ ಸ್ವಚ್ಛ ಮಂಗಳೂರು ಅಭಿಯಾನವು ರವಿವಾರ ನಗರದ ಉರ್ವ ಪರಿಸರದಲ್ಲಿ ನಡೆಯಿತು.
ಅಂತಾರಾಷ್ಟ್ರೀಯ ತರಬೇತುದಾರ ಪ್ರೋ. ವಿಜಯ್ ಮೆನನ್ ಕೊಚ್ಚಿ, ಪೈಂಟ್ ಡೀಲರ್ರ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಗುರುದತ್ತ ಶೆಣೈ ದ.ಕ.ಜಿಪಂ ಪ್ರವೇಶ ದ್ವಾರದ ಬಳಿ ಶ್ರಮದಾನಕ್ಕೆ ಚಾಲನೆ ನೀಡಿದರು.
ಅಭಿಯಾನದ ಮಾರ್ಗದರ್ಶಿ ಗಣೇಶ್ ಕಾರ್ಣಿಕ್, ಅನಿರುದ್ಧ ನಾಯಕ್, ಸುರೇಶ್ ಶೆಟ್ಟಿ, ಪೈಂಟ್ ಡೀಲರ್ಸ್ ಅಸೋಶಿಯೇಶನ್‌ನ ಉಪಾಧ್ಯಕ್ಷ ಮಹೇಶ್ ಕಾಮತ್, ಖಜಾಂಚಿ ಪದ್ಮನಾಭ ನಾಯಕ, ಮಧುಸೂದನ್ ಮತ್ತಿತರರು ಉಪಸ್ಥಿತರಿದ್ದರು.
Next Story