ಕರ್ಜೆ ಅರ್ಚಕರ ಮೇಲಿನ ಹಲ್ಲೆ ಖಂಡಿಸಿ ಧರಣಿ

ಬ್ರಹ್ಮಾವರ, ಡಿ.16: ಇತ್ತೀಚೆಗೆ ಕರ್ಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅರ್ಚಕರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಬ್ರಾಹ್ಮಣರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ರವಿವಾರ ಕರ್ಜೆಯಲ್ಲಿ ಪಾದಯಾತ್ರೆ ಮತ್ತು ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.
ಬ್ರಹ್ಮಾವರ ಬ್ರಾಹ್ಮಣ ಸಂಘದ ಅಧ್ಯಕ್ಷ ಅಶೋಕ್ ಭಟ್, ಬಾಳೆಕುದ್ರು ವಲಯ ಬ್ರಾಹ್ಮಣ ಸಭಾದ ಅಧ್ಯಕ್ಷ ಶ್ರೀಪತಿ ಅಧಿಕಾರಿ, ಬ್ರಹ್ಮಾವರ ಬ್ರಾಹ್ಮಣ ವಲಯದ ಉಪಾಧ್ಯಕ್ಷ ಎನ್.ಎಸ್.ಅಡಿಗ, ವೇದಮೂರ್ತಿ ಉಮೇಶ್ ಬಾಯರಿ, ಬಾಳೆಕುದ್ರು ವಿಘ್ನೇಶ್ ಅಡಿಗ, ಅರ್ಚಕ ಮನೆತನದ ಹಿರಿಯರಾದ ಬಲರಾಮ ಕಲ್ಕೂರ್ ಮೊದಲಾದವರು ಉಪಸ್ಥಿತರಿದ್ದರು.
Next Story