ಮುಶ್ತಾಕ್ ಅಹ್ಮದ್ ಹೆಜ್ಮಾಡಿ ನಿಧನ
ಮೂಡುಬಿದಿರೆ, ಡಿ.16: ಇಲ್ಲಿನ ಕೋಟೆಬಾಗಿಲು ನಿವಾಸಿ ಮುಶ್ತಾಕ್ ಅಹ್ಮದ್ ಹೆಜ್ಮಾಡಿ (70) ಬಸ್ನಲ್ಲಿ ಬೆಂಗಳೂರಿಗೆ ಹೋಗುವ ದಾರಿಯಲ್ಲಿ ರವಿವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಪುತ್ರನನ್ನು ಅಗಲಿದ್ದಾರೆ.
ಮೂಡುಬಿದಿರೆಯಲ್ಲಿ ಅಕೌಂಟೆಂಟ್ ಆಗಿದ್ದ ಅವರು ಬಳಿಕ ಸೌದಿ ಅರೇಬಿಯಾದ ಜಿದ್ದಾದಲ್ಲಿ ವೃತ್ತಿ ಜೀವನ ನಡೆಸಿದ್ದರು. ನಿವೃತ್ತಿ ನಂತರ ಮೂಡುಬಿದಿರೆ ಸಮೀಪದ ಕೋಟೆಬಾಗಿಲಿನಲ್ಲಿ ನೆಲೆಸಿದ್ದರು. ಮೃತರ ಅಂತ್ಯಕ್ರಿಯೆಯು ಡಿ.17ರಂದು ಸಂಜೆ 7 ಗಂಟೆಗೆ ಕೋಟೆಬಾಗಿಲು ಖಿಲ್ಲಾ ಸುನ್ನೀ ಜಾಮಿಯಾ ಮಸ್ಜಿದ್ನ ಖಬರಸ್ತಾನದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Next Story