ಸುರಿಬೈಲ್: ಎಸ್ ವೈ ಎಸ್ ದ.ಕ. ಜಿಲ್ಲಾ ಅಸೆಂಬ್ಲಿ

ಮಂಗಳೂರು, ಡಿ. 16: ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಳೆದ ಮೂರು ತಿಂಗಳಿಂದ ಬ್ರಾಂಚ್, ಸೆಂಟರ್ ಮತ್ತು ಝೋನ್ ಗಳಲ್ಲಿ ಅಸೆಂಬ್ಲಿ ಕಾರ್ಯಕ್ರಮ ನಡೆದಿದ್ದು, ಬಂಟ್ವಾಳದ ಸುರಿಬೈಲ್ ದಾರುಲ್ ಅಶ್ಹರಿಯ್ಯಾ ವಿದ್ಯಾ ಕೇಂದ್ರದಲ್ಲಿ ರವಿವಾರ ಜಿಲ್ಲಾ ಅಸೆಂಬ್ಲಿ ನಡೆಯಿತು.
ಸುರಿಬೈಲ್ ಉಸ್ತಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾಧ್ಯಕ್ಷ ಪಿ ಎಂ ಉಸ್ಮಾನ್ ಸಅದಿ ಪಟ್ಟೋರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುನ್ನಿ ಪೈಝಿ ದುಆ ನೆರವೇರಿಸಿ, ತೋಕೆ ಕಾಮಿಲ್ ಸಖಾಫಿ ಉದ್ಘಾಟಿಸಿದರು. ಎಸ್ ಪಿ ಹಂಝ ಸಖಾಫಿ ಬಂಟ್ವಾಳ ವಿಷಯ ಮಂಡಿಸಿದರು.
ಈ ಸಂದರ್ಭ ಕಿನ್ಯ ತಂಙಲ್, ಬನ್ನೂರು ತಂಙಲ್, ಡಿ ಎಚ್ ಸಅದಿ, ಡಿ ಕೆ ಉಮರ್ ಸಖಾಫಿ, ಮಂಗಳೂರು 4 ಝೋನ್ ಅಧ್ಯಕ್ಷರುಗಳಾದ ಅಶ್ಹರಿಯ್ಯಾ ಸಖಾಫಿ, ಹಂಝ ಮದನಿ, ಮಜೂರು ಸಅದಿ, ಎಸ್ ಎಮ್ ತಂಙಲ್ ಹಾಗೂ ಹನೀಫ್ ಹಾಜಿ, ಖಾಸಿಂ ಪದ್ಮುಂಜೆ, ಉಮರ್ ಮಾಸ್ಟರ್, ಹಮೀದ್ ಸಅದಿ, ಸಾಮನಿಗೆ ಮದನಿ, ಉರುಮನೆ ಸಅದಿ, ಎಂ ಎಚ್ ಖಾದರ್, ಬಶೀರ್ ಹಾಜಿ, ಖಾಸಿಂ ಹಾಜಿ, ಮುತ್ತಲಿಬ್ ಹಾಜಿ , ಪುತ್ತುಬಾವ ಹಾಜಿ, ಹಮೀದ್ ಕೊಡುಂಗೈ, ಜಿಲ್ಲಾ ಕೌನ್ಸಿಲರ್ ಗಳು, ಝೋನ್ ಕಾರ್ಯಕಾರಿಣಿ ಸದಸ್ಯರು,31 ಸೆಂಟರ್ ಗಳ ಕಾರ್ಯಕಾರಿಣಿ ಸದಸ್ಯರು, 293 ಬ್ರಾಂಚ್ ಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮತ್ತು ಕೋಶಾಧಿಕಾರಿಗಳು ಭಾಗವಹಿಸಿದ್ದರು.
ಸಮಸ್ತ ಉಪಾಧ್ಯಕ್ಷ ಆಲಿಕುಂಞ ಉಸ್ತಾದ್ ದುಆ ನೆರವೇರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಸ್ವಾಗತಿಸಿ, ಖಲೀಲ್ ಕಾವೂರು ಕಾರ್ಯಕ್ರಮ ನಿರೂಪಿಸಿದರು.