ಪಡುಬಿದ್ರೆ ಮೊಹಮ್ಮಡನ್ ತಂಡಕ್ಕೆ ಕಂಚಿನಡ್ಕ 'ಕೆಎಫ್‍ಸಿ ಟ್ರೋಫಿ-2018'

ಪಡುಬಿದ್ರೆ, ಡಿ. 17: ಕಂಚಿನಡ್ಕ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಆಶ್ರಯದಲ್ಲಿ ಕಂಚಿನಡ್ಕದಲ್ಲಿ ನಡೆದ ಅಂತಾರಾಜ್ಯ ವಾಲಿಬಾಲ್ ಪಂದ್ಯಾಟದಲ್ಲಿ ಸೌದಿ ಅರೇಬಿಯಾದ ಆಸಿಫ್ ಮಾಲಕತ್ವದ ಮೊಹಮ್ಮಡನ್ ತಂಡವು ಕೆಎಫ್‍ಸಿ ಟ್ರೋಫಿ-2018 ಸಹಿತ ನಗದು 50 ಸಾವಿರ ರೂ. ಪಡೆಯಿತು.
ಫೈನಲ್ ನಲ್ಲಿ ಮೊಹಮ್ಮಡನ್ ತಂಡವು ಜಾಕ್ಸನ್ ಮುಚ್ಚೂರು ಮಾಲಕತ್ವದ ಮುಚ್ಚೂರು ಪ್ರಗತಿ ಫ್ರೆಂಡ್ಸ್ ತಂಡವನ್ನು 25-22, 25-23 ಅಂಕಗಳಿಂದ ಸೋಲಿಸಿತು.
ಮೊಹಮ್ಮಡನ್ ತಂಡವು ಸೆಮಿಫೈನಲ್‍ನಲ್ಲಿ ಕಂಚಿನಡ್ಕದ ಆಸಿಫ್ ಮತ್ತು ಫಯಾಝ್ ಎಸ್‍ಪಿ ಮಾಲಕತ್ವದ ಆಪತ್ಭಾಂಧವ ಅರಾಫಾ ಬಾಯ್ಸ್ ತಂಡವನ್ನು 25-18, 27-25 ಅಂಕಗಳಿಂದಲೂ, ಪ್ರಗತಿ ಫ್ರೆಂಡ್ಸ್ ತಂಡವು ಸುರೇಂದ್ರ ಕುಂಟಾಡಿ ಮಾಲಕತ್ವದ ರಕ್ತೇಶ್ವರೀ ಫ್ರೆಂಡ್ಸ್ ತಂಡವನ್ನು 25-17, 26-24 ಅಂಕಗಳಿಂದಲೂ ಸೋಲಿಸಿ ಫೈನಲ್ ಪ್ರವೇಶಿಸಿತ್ತು.
ಆಪತ್ಭಾಂಧವ ಅರಾಫಾ ಬಾಯ್ಸ್ ತಂಡವು ತೃತೀಯ ಟ್ರೋಫಿ ಸಹಿತ 20 ಸಾವಿರ ರೂ. ನಗದು, ರಕ್ತೇಶ್ವರೀ ಫ್ರೆಂಡ್ಸ್ ಕುಂಟಾಡಿ ತಂಡವು ಚತುರ್ಥ ಟ್ರೋಫಿ ಸಹಿತ 10 ಸಾವಿರ ರೂ. ನಗದು ಪಡೆಯಿತು.
ಪ್ರಗತಿ ತಂಡದ ಫೈಝ್ ಅತ್ಯುತ್ತಮ ಆಲ್‍ರೌಂಡರ್ ವೈಯಕ್ತಿಕ ಪ್ರಶಸ್ತಿ ಪಡೆದರೆ, ಅತ್ಯುತ್ತಮ ಲಿಬ್ರೋ ಆಗಿ ಅದೇ ತಂಡದ ಹರಿಪ್ರಸಾದ್, ಅತ್ಯುತ್ತಮ ಬ್ಲಾಕರ್ ಆಗಿ ಪ್ರಗತಿ ತಂಡದ ಭರತ್, ಅತ್ಯುತ್ತಮ ಎಟ್ಯಾಕರ್ ಆಗಿ ಮೊಹಮ್ಮಡನ್ ತಂಡದ ಅಶ್ವಲ್ ರೈ, ಅತ್ಯುತ್ತಮ ಲಿಫ್ಟರ್ ಆಗಿ ಅದೇ ತಂಡದ ಸಾವನ್ ವೈಯಕ್ತಿಕ ಪ್ರಶಸ್ತಿ ಪಡೆದರು.
ಉಡುಪಿ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಹಾಗೂ ಕೆಎಫ್‍ಸಿಯ ಗೌರವಾಧ್ಯಕ್ಷ ಶಶಿಕಾಂತ್ ಪಡುಬಿದ್ರೆ, ಪಡುಬಿದ್ರೆ ಫ್ರೆಂಡ್ಸ್ ಅಧ್ಯಕ್ಷ ನವೀನ್ ಚಂದ್ರ ಜೆ.ಶೆಟ್ಟಿ, ದಲಿತ ಸಂಘರ್ಷ ಸಮಿತಿ ಸಂಚಾಲಕ ಲೋಕೇಶ್ ಪಡುಬಿದ್ರೆ, ಪತ್ರಕರ್ತ ಹರೀಶ್ ಹೆಜ್ಮಾಡಿ, ಕೆಎಫ್‍ಸಿ ಅಧ್ಯಕ್ಷ ದಿನೇಶ್ ಕೋಟ್ಯಾನ್, ಹಿರಿಯ ವಾಲಿಬಾಲ್ ಆಟಗಾರ ಬಶೀರ್ ಕಂಚಿನಡ್ಕ ಉಪಸ್ಥಿತರಿದ್ದರು.
ಕೆಎಫ್‍ಸಿ ಕಾರ್ಯದರ್ಶಿ ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರ್ವಹಿಸಿದರು.