ಅಂಬ್ಲಮೊಗರು: ಡಿ.19ಕ್ಕೆ ಖ್ಯಾತ ವಾಗ್ಮಿ ಸಿಂಸಾರುಲ್ ಹಕ್ ಹುದವಿ ಪ್ರಭಾಷಣ

ಮಂಗಳೂರು, ಡಿ.17: ಮಂಗಳೂರು ತಾಲೂಕು ಅಂಬ್ಲಮೊಗರು ಗ್ರಾಮದ ಕುಂಡೂರು ಜುಮಾ ಮಸ್ಜಿದ್ ಇದರ ಅಂಗ ಸಂಸ್ಥೆಯಾದ ನಸ್ರತುಲ್ ಇಸ್ಲಾಂ ಸಮಿತಿಯ 40ನೆ ವಾರ್ಷಿಕೋತ್ಸವದಲ್ಲಿ ಅಂತರ್ ರಾಷ್ಟ್ರೀಯ ಇಸ್ಲಾಮಿಕ್ ಪ್ರಭಾಷಣಕಾರ ಅಬುಧಾಬಿಯ ಬ್ರಿಟಿಷ್ ಇಂಟರ್ ನ್ಯಾಶನಲ್ ಸ್ಕೂಲ್ ನ ಉಪನ್ಯಾಸ ಸಿಂಸಾರುಲ್ ಹಕ್ ಹುದವಿ ಭಾಗವಹಿಸಲಿದ್ದಾರೆ.
ಕುರ್ ಆನ್ ಕರೆಯುತ್ತಿದೆ ಒಳಿತಿನೆಡೆಗೆ ಎಂಬ ವಿಷಯದ ಬಗ್ಗೆ ಪ್ರಭಾಷಣ ಮಾಡಲಿದ್ದಾರೆ ಎಂದು ಮಸೀದಿಯ ಅಧ್ಯಕ್ಷ ರಫೀಕ್ ಅಂಬ್ಲಮೊಗರು ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದ್ದಾರೆ.
ಡಿ.19ರಂದು ಸಂಜೆ 7:.30ಕ್ಕೆ ಕುಂಡೂರು ಜುಮಾ ಮಸೀದಿ ವಠಾರ ಮದಕ (ಪರಿಯಕ್ಕಳ) ಅಂಬ್ಲಮೊಗರುವಿನಲ್ಲಿ ನಡೆಯಲಿರುವ ವಾರ್ಷಿಕ ಸಮಾರಂಭದಲ್ಲಿ ರಾಜ್ಯನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ. ಖಾದರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಕೆ.ಎಸ್.ಮುಹಮ್ಮದ್ ತಂಞಿಳ್ ಕುಂಬೋಳ್ ದುವಾ ಮಾಡಲಿದ್ದು, ದ.ಕ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹಮ್ಮದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ.
ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬೂಬಕರ್ ಸಿದ್ದೀಕ್ ವಹಿಸಲಿದ್ದಾರೆ. ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ ರಶೀದ್ ಯಮಾನಿ ಭಾಗವಹಿಸಲಿದ್ದಾರೆ ಎಂದು ರಫೀಕ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಅಂಬ್ಲಮೊಗರು ಕುಂಡೂರು ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಬೂಬಕರ್ ಸಿದ್ಧಿಕ್, ಉಪಾಧ್ಯಕ್ಷ ಅಬೂಬಕರ್ ಬೀಡಿ,
ಕೋಶಾಧಿಕಾರಿ ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು.