ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ವಾರ್ಷಿಕ ಮಹಾಸಭೆ

ಮೊಂಟೆಪದವು, ಡಿ. 17: ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಮಹಾಸಭೆಯು ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಅಧ್ಯಕ್ಷ ಇರ್ಶಾದ್ ಮದನಿ ಮೊಂಟೆಪದವು ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ಮರಿಕ್ಕಳ ಶಾಖೆಯ ಕಚೇರಿಯಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಹಾಗೂ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸದಸ್ಯ ಸಯ್ಯದ್ ಖುಬೈಬ್ ತಂಙಳ್ ಮಾತನಾಡಿದರು.
ಚುನಾವಣಾ ವೀಕ್ಷಕರಾಗಿ ಆಗಮಿಸಿದ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ ತರಗತಿಯನ್ನು ನಡೆಸಿದರು.
ಗತ ವರ್ಷದ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಿ, ಅನಮೋದಿಸಿದ ನಂತರ 2019 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಅಧ್ಯಕ್ಷರಾಗಿ ಇರ್ಶಾದ್ ಮದನಿ ಮೊಂಟೆಪದವು, ಉಪಾಧ್ಯಕ್ಷರುಗಳಾಗಿ ಇಲ್ಯಾಸ್ ಪೊಟ್ಟೊಳಿಕೆ ಹಾಗೂ ಸರ್ಫಾಝ್ ಕಲ್ಲರ್ಬೆ, ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ಹಿಮಮಿ ಮೊಂಟೆಪದವು, ಕಾರ್ಯದರ್ಶಿಗಳಾಗಿ ಇರ್ಶಾದ್ ಮುದಸ್ಸಿರ್ ಹಾಗೂ ಜಾಬಿರ್ ತೋಟಾಲ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ನೌಶಾದ್ ನಡುಪದವು, ಕೋಶಾಧಿಕಾರಿಯಾಗಿ ಶರೀಫ್ ವಿದ್ಯಾನಗರ, ಎಸ್.ಬಿ.ಎಸ್ ಕನ್ವೀನರಾಗಿ ನಾಝಿಮ್ ಮೊಂಟೆಪದವು, ಹೈಸ್ಕೂಲ್ ಕನ್ವೀನರಾಗಿ ಆಶಿಕ್ ಪಡಿಕ್ಕಲ್ ಅವರುಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಮರಿಕ್ಕಳ ಶಾಖೆಯ ಅಧ್ಯಕ್ಷ ಅಝರ್ ಅಗಲ್ತಬೆಟ್ಟು, ಸಿರಾಜ್ ನಿಡ್ಮಾಡ್, ಹಾರಿಸ್ ಮಜಲ್, ಇಕ್ಬಾಲ್ ನಿಡ್ಮಾಡ್ ಮೊದಲಾದವರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಉಪಾಧ್ಯಕ್ಷ ಶಂಶುದ್ದೀನ್ ಮೊಂಟೆಪದವು ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಹಿಮಮಿ ವಂದಿಸಿದರು.