ಯುನಿವೆಫ಼್ ಕರ್ನಾಟಕದ 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಅಭಿಯಾನದ ಕಚೇರಿ ಉದ್ಘಾಟನೆ

ಮಂಗಳೂರು, ಡಿ. 17: ಯುನಿವೆಫ಼್ ಕರ್ನಾಟಕ ನ.30 ರಿಂದ ಫೆ. 1ರವರೆಗೆ ಹಮ್ಮಿಕೊಂಡಿರುವ ಅರಿಯಿರಿ ಮನುಕುಲದ ಪ್ರವಾದಿಯನ್ನು ಅಭಿಯಾನದ ಕಚೇರಿಯನ್ನು ಫಳ್ನೀರ್ ನಲ್ಲಿರುವ ಲುಲು ಸೆಂಟರ್ ನಲ್ಲಿ ಡೈಕಿನ್ ಫಿಶರೀಸ್ ಮಾಲಕ ಇದ್ದಿ ಕುಂಞಿ ಉದ್ಘಾಟಿಸಿದರು.
ಯುನಿವೆಫ್ ಲಾಂಛನವನ್ನು ಹಾರೂನ್ ರಶೀದ್ ಉಳ್ಳಾಲ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಯುನಿವೆಫ್ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಕಾರ್ಯದರ್ಶಿ ಯು.ಕೆ. ಖಾಲಿದ್, ಜಿಲ್ಲಾಧ್ಯಕ್ಷ ಮತ್ತು ಅಭಿಯಾನ ಸಂಚಾಲಕ ಅಬ್ದುಲ್ಲಾ ಪಾರೆ, ಉದ್ಯಮಿಗಳಾದ ಅಲ್ತಾಫ್ ಮತ್ತು ಅನ್ವರ್ ಉಪಸ್ಥಿತರಿದ್ದರು.
Next Story