ಎನ್‌ಎಂಪಿಟಿ: ಚುನಾವಣೆಯಲ್ಲಿ ಇಂಟಕ್‌ಗೆ ಗೆಲುವು

ಮಂಗಳೂರು, ಡಿ.17: ನವಮಂಗಳೂರು ಬಂದರಿನಲ್ಲಿ (ಎನ್‌ಎಂಪಿಟಿ) ಬೃಹತ್ ಕಾರ್ಮಿಕ ಸಂಘಟನೆಯಾಗಿ ಇಂಟಕ್ ಹೊರಹೊಮ್ಮಿದ್ದು, ಸೋಮವಾರ ವಿಜಯೋತ್ಸವ ಆಚರಿಸಿತು.
ಚೆಕಪ್ ಪದ್ದತಿಯಲ್ಲಿ ನಡೆಯುವ ಚುನಾವಣೆಯಲ್ಲಿ ಇಂಟಕ್ ಅತೀ ಹೆಚ್ಚು ಮತಗಳನ್ನು ಪಡೆದು ಅತೀ ದೊಡ್ಡ ಕಾರ್ಮಿಕ ಸಂಘಟನೆಯಾಗಿ ಹೊರಹೊಮ್ಮಿದೆ. ಬಂದರು ಮುಖ್ಯದ್ವಾರದಿಂದ ಯು.ಶ್ರೀನಿವಾಸ್ ಮಲ್ಯ ಗೇಟ್‌ವರೆಗೆ ಇಂಟಕ್ ಕಾರ್ಯಕರ್ತರು ಮೆರವಣಿಗೆ ನಡೆಸಿ ಸಂಭ್ರಮ ಆಚರಿಸಿದರು.
ಈ ಸಂದರ್ಭ ಇಂಟಕ್ ನಾಯಕರಾದ ಎನ್.ಎಂ. ಅಡ್ಯಂತಾಯ, ರಾಕೇಶ್ ಮಲ್ಲಿ, ಎನ್‌ಎಂಪಿಟಿ ಟ್ರಸ್ಟಿ ಅಬೂಬಕರ್ ಮಾತನಾಡಿದರು. ದ.ಕ ಇಂಟಕ್ ಅಧ್ಯಕ್ಷ ಮನೋಹರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ರಹೀಂ, ಡಿ.ಆರ್ ನಾರಾಯಣ್, ಪಿ.ಕೆ ಸುರೇಶ್ ಕುಮಾರ್, ಹರೀಶ್ ಕುಮಾರ್, ಫಾರೂಕ್ ಮತ್ತಿತರರು ಪಾಲ್ಗೊಂಡಿದ್ದರು. ವಿಜಯ್ ಸುವರ್ಣ ಬೆಂಗ್ರೆ ಸ್ವಾಗತಿಸಿದರು.
Next Story