ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 2 ತಿಂಗಳ ಮಗು ಸೇರಿ 6 ಮಂದಿ ಮೃತ್ಯು
ಹಲವರಿಗೆ ಗಾಯ
ಹೊಸದಿಲ್ಲಿ, ಡಿ.17: ಮುಂಬೈಯ ಅಂಧೇರಿಯ ಆಸ್ಪತ್ರೆಯೊಂದರಲ್ಲಿ ನಡೆದ ಅಗ್ನಿ ಅವಘಡದಲ್ಲಿ 2 ತಿಂಗಳ ಮಗು ಸೇರಿ 6 ಮಂದಿ ಮೃತಪಟ್ಟಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಬೆಂಕಿ ಈಗ ನಿಯಂತ್ರಣಕ್ಕೆ ಬಂದಿದ್ದು, ಆಸ್ಪತ್ರೆಯಲ್ಲಿದ್ದ ಎಲ್ಲರನ್ನೂ ರಕ್ಷಿಸಲಾಗಿದೆ. ಮಗು ಹೊರತಾಗಿ ಇತರ ಐವರು ಮೃತಪಟ್ಟಿದ್ದಾರೆ. ಎರಡು ಮೃತದೇಹಗಳನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Next Story