ಗ್ರಾಪಂ ಚುನಾವಣೆ: ಮೊದಲ ದಿನ 6 ನಾಮಪತ್ರ
ಉಡುಪಿ, ಡಿ.17: ಕುಂದಾಪುರ ತಾಲೂಕಿನ ಗಂಗೊಳ್ಳಿ, ಬೈಂದೂರು ತಾಲೂಕಿನ ಬೈಂದೂರು ಮತ್ತು ಯಡ್ತರೆ ಗ್ರಾಪಂಗಳಿಗೆ, ಜಿಲ್ಲೆಯ ವಿವಿಧ ಗ್ರಾಪಂಗಳಲ್ಲಿ ವಿವಿಧ ಕಾರಣಗಳಿಗಾಗಿ ತೆರವುಗೊಂಡ ಎಂಟು ಗ್ರಾಪಂಗಳ ಎಂಟು ಸ್ಥಾನಗಳಿಗೆ ಚುನಾವಣೆಯ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ನಾಮಪತ್ರ ಸಲ್ಲಿಕೆಯ ಮೊದಲ ದಿನ ಒಟ್ಟು ಆರು ನಾಮಪತ್ರಗಳು ಸಲ್ಲಿಕೆ ಯಾಗಿವೆ.
ಅವಧಿ ಮುಕ್ತಾಯಗೊಂಡ ಗಂಗೊಳ್ಳಿ ಗ್ರಾಪಂನ ಎಂಟು ಕ್ಷೇತ್ರಗಳ 33 ಸ್ಥಾನ ಗಳಿಗೆ, ಬೈಂದೂರು ಗ್ರಾಪಂನ ಆರು ಕ್ಷೇತ್ರಗಳ 21 ಸ್ಥಾನ ಹಾಗ ಯಡ್ತರೆ ಗ್ರಾಪಂನ ಎಂಟು ಕ್ಷೇತ್ರಗಳ 25 ಸ್ಥಾನಗಳಿಗೆ ಜ.2ರಂದು ಚುನಾವಣೆ ನಡೆಯಲಿದೆ. ಇದರೊಂದಿಗೆ ಹಂದಾಡಿ, ಬಾರಕೂರು, ಯಡ್ತಾಡಿ, ಕಡೆಕಾರು, ಬೈಲೂರು, ನಿಟ್ಟೆ, ಉಳ್ಳೂರು ಹಾಗೂ ಕೆರ್ಗಾಲು ಗ್ರಾಪಂಗಳ ತಲಾ ಒಂದು ಸ್ಥಾನಗಳಿಗೆ ಅಂದೇ ಮತದಾನ ನಡೆಯಲಿದೆ.
ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಇಂದು ಗಂಗೊಳ್ಳಿ ಗ್ರಾಪಂ ವ್ಯಾಪ್ತಿ ಯಲ್ಲಿ ನಾಲ್ಕು ಹಾಗೂ ಕೆರ್ಗಾಲು ಗ್ರಾಪಂ ವ್ಯಾಪ್ತಿಯಲ್ಲಿ ಎರಡು ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆಗೆ ಡಿ.20 ಕೊನೆಯ ದಿನವಾಗಿದೆ ಹಾಗೂ ನಾಮಪತ್ರ ಹಿಂದೆಗೆತಕ್ಕೆ ಡಿ.24 ಅಂತಿಮ ದಿನವಾಗಿರುತ್ತದೆ.