ಖ್ಯಾತ ಶಾಸ್ತ್ರೀಯ ಸಂಗೀತಕಾರ ಪಂಡಿತ ಅರುಣ ಭಾದುರಿ ನಿಧನ
ಕೋಲ್ಕತಾ,ಡಿ.17: ಖ್ಯಾತ ಶಾಸ್ತ್ರೀಯ ಸಂಗೀತಕಾರ ಪಂಡಿತ ಅರುಣ್ ಭಾದುರಿ(75) ಅವರು ಸೋಮವಾರ ಬೆಳಿಗ್ಗೆ ನಗರದ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅವರು ಸುದೀರ್ಘ ಕಾಲದಿಂದ ಶ್ವಾಸಕೋಶ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.
ಬೆಂಗಾಲಿ ಹಾಡುಗಳು ಮತ್ತು ಭಜನ್‌ಗಳ ಗಾಯನದಲ್ಲಿ ಅಗ್ರಗಣ್ಯರಲ್ಲೊಬ್ಬರಾಗಿದ್ದ ಭಾದುರಿ ನಿಧನಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಐಟಿಸಿ ಸಂಗೀತ ಸಂಶೋಧನಾ ಅಕಾಡೆಮಿಯಲ್ಲಿ ಗುರುಗಳಾಗಿದ್ದ ಭಾದುರಿ ಅಗ್ರ ರೇಡಿಯೊ ಮತ್ತು ಟಿವಿ ಕಲಾವಿದರೂ ಆಗಿದ್ದರು. 2014ರಲ್ಲಿ ವಂಗವಿಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದ ಅವರು ಮುಹಮ್ಮದ್ ಎ ದಾವೂದ್ ಮತ್ತು ಮುಹಮ್ಮದ್ ಸಗೀರುದ್ದೀನ್ ಖಾನ್ ಅವರಿಂದ ಶಾಸ್ತ್ರೀಯ ಸಂಗೀತ ತರಬೇತಿ ಪಡೆದಿದ್ದರು.
Next Story