ಉಳ್ಳಾಲ: ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಮಾಹಿತಿ ಕಾರ್ಯಕ್ರಮ

ಮಂಗಳೂರು , ಡಿ. 17: ಹಂಪನಕಟ್ಟೆಯ ಕುನಿಲ್ ಮೈಂಟೆನೆನ್ಸ್ ಹಾಗೂ ಡೆವಲಪರ್ಸ್ ವತಿಯಿಂದ ಉತ್ತರ ಪೊಲೀಸ್ ಠಾಣಾ 42ನೇ ಬೀಟ್ ಅಪರಾಧ ತಡೆ ಮಾಸಾಚರಣೆ 2018 ಪ್ರಯುಕ್ತ ಹಂಪನಕಟ್ಟೆ ವ್ಯಾಪ್ತಿಯ ಜನಸಂಪರ್ಕ ಸಭೆಯು ಕುನಿಲ್ ಸೆಂಟರ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಬಂದರು ಠಾಣಾ ಕ್ರೈಂ ಸಬ್ ಇನ್‍ಸ್ಪೆಕ್ಟರ್ ಸುಂದರಾಚಾರ್ಯ ಅವರು ಪ್ರಸಕ್ತ ನಡೆಯುವ ಕಳ್ಳತನ, ದರೋಡೆ, ಸುಳಿಗೆ, ಕಿರುಕುಳ ಮೊದಲಾದ ಬಗ್ಗೆ ಮಾಹಿತಿ ನೀಡಿದರು ಹಾಗೂ ಇಂತಹ ಅಪರಾಧಿಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಸಾರ್ವಜನಿಕರೊಂದಿಗೆ ಕೈ ಜೋಡಿಸಬೇಕು ಎಂದು ಹೇಳಿದರು. ಮೈಂಟನೆನ್ಸ್ ಕಮಿಟಿ ಉಸ್ತುವಾರಿ ಮುಹ್ ಸಿರ್ ಅಹ್ಮದ್ ಸಾಮಣಿಗೆ ಅವರು ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ಕ್ರೈಂ ಬ್ರಾಂಚ್ ಇನ್‍ಸ್ಪೆಕ್ಟರ್ ಸುಂದರಾಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕುನಿಲ್ ಕಮಿಟಿ ಅಧ್ಯಕ್ಷ ಕೃಷ್ಣ ಸಾಲ್ಯಾನ್ ಬಿಜೈ, ಬಂದರು ಠಾಣಾ ಇನ್‍ಸ್ಪೆಕ್ಟರ್ ಅನಂತ ಮೂಡೇಶ್ವರ, ಎ.ಎಸ್.ಗವಾರ್, ಬೀಟ್ ಪೊಲೀಸ್ ಪೂರ್ಣಿಮಾ, ಕಮಿಟಿ ಉಪಾಧ್ಯಕ್ಷ ಪಯಾಝ್ ಮೈಸೂರು, ಕಮಿಟಿ ಪ್ರಮುಖರಾದ ಇರ್ಫಾನ್, ಸಮೀರ್, ರಶೀದ್, ಚುಣರಿ, ವಾಸು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಕೃಷ್ಣ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.