Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ನೀವು ಫೋನ್ ಮರೆತರೆ ನೆನಪಿಸುತ್ತೆ ಈ...

ನೀವು ಫೋನ್ ಮರೆತರೆ ನೆನಪಿಸುತ್ತೆ ಈ ಜಾಕೆಟ್ !

ಇದನ್ನು ತೊಟ್ಟರೆ ನೀವು ಸಂಗೀತವನ್ನೂ ಕೇಳಬಹುದು

ವಾರ್ತಾಭಾರತಿವಾರ್ತಾಭಾರತಿ17 Dec 2018 10:32 PM IST
share
ನೀವು ಫೋನ್ ಮರೆತರೆ ನೆನಪಿಸುತ್ತೆ ಈ ಜಾಕೆಟ್ !

ಕೆಲವೊಮ್ಮೆ ನಾವು ನಮ್ಮ ಸ್ಮಾರ್ಟ್‌ಫೋನ್‌ನ್ನು ಮನೆಯಲ್ಲಿಯೇ ಮರೆತು ಹೊರಗೆ ಹೋಗುತ್ತೇವೆ ಅಥವಾ ಜೊತೆಯಲ್ಲಿದ್ದರೂ ಬೇರೆ ಕಡೆ ಹೋಗಿದ್ದಾಗ ಅಲ್ಲಿಯೇ ಮರೆತುಬಿಡುತ್ತೇವೆ. ಇಂತಹ ಸಂದರ್ಭಗಳಲ್ಲಿ ಸ್ಮಾರ್ಟ್‌ಫೋನ್ ಬಳಸಬೇಕಾದ ತುರ್ತು ಅಗತ್ಯ ಬಿದ್ದರೆ ಒದ್ದಾಡುವಂತಾಗುತ್ತದೆ. ಇಂತಹವರಿಗಾಗಿಯೇ ಈಗ ಹೊಸ ಜಾಕೆಟ್ ಸೃಷ್ಟಿಯಾಗಿದ್ದು, ಅದು ಫೋನ್‌ನ್ನು ಮರೆತಿದ್ದರೆ ಆ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತದೆ.

ಗೂಗಲ್ ಮತ್ತು ಲೆವಿಸ್‌ನ ಕಮ್ಯುಟರ್ ಎಕ್ಸ್ ಜಾಕಾರ್ಡ್ ಜಾಕೆಟ್ ಈಗ ಇನ್ನಷ್ಟು ಸ್ಮಾರ್ಟ್ ಆಗಿದೆ. ಗೂಗಲ್ ಈ ಜಾಕೆಟ್‌ನಲ್ಲಿ ‘ಆಲ್ವೇಸ್ ಟುಗೆದರ್(ಸದಾ ಜೊತೆಯಲ್ಲಿ)’ ಎಂಬ ಹೊಸ ವೈಶಿಷ್ಟವನ್ನು ಪರಿಚಯಿಸಿದ್ದು,ಇದು ಬಳಕೆದಾರರು ತಮ್ಮ ಸ್ಮಾರ್ಟ್‌ಪೋನ್ ಅಥವಾ ಜಾಕೆಟ್‌ನ್ನು ಎಲ್ಲೆಂದರಲ್ಲಿ ಮರೆಯುವುದನ್ನು ತಪ್ಪಿಸುತ್ತದೆ.

‘ಆಲ್ವೇಸ್ ಟುಗೆದರ್’ ಒಂದು ಸ್ವಯಂಚಾಲಿತ ಎಚ್ಚರಿಕೆಯ ವ್ಯವಸ್ಥೆಯಾಗಿದ್ದು ನಿಮ್ಮ ಸ್ಮಾರ್ಟ್‌ಫೋನ್ ಮತ್ತು ಜಾಕೆಟ್ ನಡುವಿನ ಅಂತರವನ್ನು ನೀವು ಸೆಟ್ ಮಾಡಿಟ್ಟರೆ,ಈ ಅಂತರ ಇದಕ್ಕಿಂತ ಹೆಚ್ಚಾದಾಗ ಅದು ನಿಮಗೆ ಈ ಬಗ್ಗೆ ನೆನಪಿಸುತ್ತದೆ.

ಈ ವ್ಯವಸ್ಥೆ ಎರಡೂ ವಿಧಗಳಲ್ಲಿ ಕೆಲಸ ಮಾಡುತ್ತದೆ. ನಿಮ್ಮ ಜಾಕೆಟ್ ಮತ್ತು ಸ್ಮಾರ್ಟ್‌ಫೋನ್ ನಡುವಿನ ಅಂತರ ನಿಗದಿತ ಮಿತಿಗಿಂತ ಹೆಚ್ಚಾದಾಗ ನಿಮ್ಮ ಫೋನ್‌ಗೆ ನೋಟಿಫಿಕೇಷನ್ ಬರುತ್ತದೆ ಹಾಗೂ ಜಾಕೆಟ್‌ನ ಟ್ಯಾಗ್ ಮಿನುಗತೊಡಗುತ್ತದೆ ಮತ್ತು ಕಂಪಿಸತೊಡಗುತ್ತದೆ. ಹೀಗೆ ನೀವು ಜಾಕೆಟ್ ಅಥವಾ ಸ್ಮಾರ್ಟ್‌ಫೋನ್ ಪೈಕಿ ಯಾವುದನ್ನೂ ಮರೆತರೂ ನಿಮಗೆ ನೆನಪಿಸುತ್ತದೆ. ಆದರೆ ಈ ಎಲ್ಲ ವೈಶಿಷ್ಟಗಳ ಲಾಭವನ್ನು ಪಡೆಯಲು ನೀವು ಜಾಕಾರ್ಡ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ ಮತ್ತು ಅದನ್ನು ನಿಮ್ಮ ಸ್ಮಾರ್ಟ್‌ಫೋನ್ ಜೊತೆಗೆ ಸಿಂಕ್ ಮಾಡಬೇಕಾಗುತ್ತದೆ.

ಈ ಜಾಕೆಟ್ ನಿಮಗಾಗಿ ಇನ್ನೂ ಹಲವಾರು ಕೆಲಸಗಳನ್ನು ಮಾಡುತ್ತದೆ. ಅದು ನೀವು ಸಂಗೀತವನ್ನು ಕೇಳಲು ನೆರವಾಗುತ್ತದೆ,ಒಳಬರುವ ಕರೆಗಳು ಮತ್ತು ಮೆಸೇಜ್ ಬಗ್ಗೆ ನಿಮಗೆ ಸೂಚನೆ ನೀಡುತ್ತದೆ. ಇಂತಹ ಹಲವು ಕೆಲಸಗಳನ್ನು ಅದು ನಿರ್ವಹಿಸುತ್ತದೆ. ಎಲ್ಲವೂ ಸ್ಮಾರ್ಟ್ ಆಗಿಯೇ ಇರಬೇಕು ಎನ್ನುವವರಿಗೆ ಈ ಸ್ಮಾರ್ಟ್ ಜಾಕೆಟ್ ಹೇಳಿ ಮಾಡಿಸಿದ್ದಾಗಿದೆ. ಈ ಜಬರ್ದಸ್ತ್ ಜಾಕೆಟ್‌ನ ಬೆಲೆ ಏನಿರಬಹುದು ಎಂಬ ಕುತೂಹಲವೇ? ಹೆಚ್ಚೇನಿಲ್ಲ,ಕೇವಲ 350 ಡಾಲರ್‌ಗಳು ಅಥವಾ ಸುಮಾರು 25,000 ರೂ.ಗಳು! ಆದರೆ ಐವತ್ತರವತ್ತು ಸಾವಿರ ರೂಪಾಯಿಗಳ ಮೊಬೈಲ್ ಬೆಲೆಗಳಿಗೆ ಹೋಲಿಸಿದರೆ ಇದು ಕಡಿಮೆಯೇ ಸೈ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X