ಆತ್ಮವಿಶ್ವಾಸದಿಂದ ಪ್ರತಿಭೆ ಹೊರಹೊಮ್ಮಲು ಸಾಧ್ಯ: ಕೌಟಿಲ್ಯ ಪಂಡಿತ್
ಬೆಂಗಳೂರು, ಡಿ. 17: ಪ್ರತಿಯೊಬ್ಬರಲ್ಲಿಯೂ ಉತ್ತಮ ಸಾಮರ್ಥ್ಯವಿದ್ದು, ಆತ್ಮವಿಶ್ವಾಸ ತುಂಬಿ, ಪ್ರಚೋದಿಸಿದರೆ ಉತ್ತಮ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ ಎಂದು ‘ಗೂಗಲ್ ಬಾಯ್’ ಕೌಟಿಲ್ಯ ಪಂಡಿತ್ ಇಂದಿಲ್ಲಿ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಏರ್ಪಡಿಸಿದ್ದ ಆಯೋಜಿಸಿದ್ದ ಕರಿಯರ್ ಉತ್ಸವ ಕಾರ್ಯಕ್ರಮದಲ್ಲಿ ಗೂಗಲ್ ಬಾಯ್ ಎಂದು ಖ್ಯಾತಿಗಳಿಸಿರುವ ಪಂಡಿತ್, ಮನಸ್ಸಿಗೆ ಉತ್ಸಾಹ ತುಂಬಿ ತರಬೇತುಗೊಳಿಸಿದರೆ ನಿಜವಾದ ಸಾಮರ್ಥ್ಯ ಹೊರಹೊಮ್ಮುತ್ತದೆ ಎಂದು ನುಡಿದರು.
ಪ್ರತಿಯೊಬ್ಬರೂ ದಿನಕ್ಕೆ ಅರ್ಧಗಂಟೆ ಮೆದುಳು ಮತ್ತು ಮನಸ್ಸನ್ನು ಚುರುಕುಗೊಳಿಸಲು ಪ್ರಯತ್ನಿಸಿದರೆ ಮನಸ್ಸಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ಅವರು ಇದೇ ಸಂದರ್ಭದಲ್ಲಿ ಸಲಹೆ ನೀಡಿದರು. ಉತ್ಸವದ ಸಂಸ್ಥಾಪಕ ಶ್ರೀಪಾಲ್ ಜೈನ್ ಹಾಜರಿದ್ದರು. ಇದೇ ವೇಳೆ ಜೈನ್ ವಿವಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು.
Next Story





