ಟಿಆರ್‌ಎಸ್ ಸಕ್ರಿಯ ಅಧ್ಯಕ್ಷರಾಗಿ ಕೆ.ಟಿ. ರಾಮ ರಾವ್
ಹೈದರಾಬಾದ್, ಡಿ. 17: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್)ನ ಕ್ರಿಯಾಧ್ಯಕ್ಷರಾಗಿ ಟಿಆರ್‌ಎಸ್ ಅಧ್ಯಕ್ಷ ಹಾಗೂ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರ ಕೆ.ಟಿ. ರಾಮ ರಾವ್ ಅಧಿಕಾರ ಸ್ವೀಕರಿಸಿದ್ದಾರೆ. 42ರ ಹರೆಯದ ರಾಮರಾವ್ ಈ ಹಿಂದಿನ ಸರಕಾರದಲ್ಲಿ ಮಾಹಿತಿ ತಂತ್ರಜ್ಞಾನ, ಕೈಗಾರಿಕೆ ಹಾಗೂ ನಗರಾಡಳಿತ ಸಚಿವರಾಗಿದ್ದರು. ಡಿಸೆಂಬರ್ 7ರಂದು ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಅವರು ಸಿರ್ಸಿಲ್ಲಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
Next Story