ಜ. 2: ಟೋಲ್ ವಿರುದ್ಧ ಹೆಜಮಾಡಿಯಲ್ಲಿ ಪ್ರತಿಭಟನೆ
ಪಡುಬಿದ್ರಿ, ಡಿ. 18: ಸ್ಥಳೀಯ ವಾಹನಗಳಿಗೆ ಹೆಜಮಾಡಿ ಟೋಲ್‍ಗೇಟ್‍ನಲ್ಲಿ ಟೋಲ್ ವಸೂಲಿ ನಡೆಸುವುದನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜ. 2ರಂದು ಹೆಜಮಾಡಿ ಟೋಲ್‍ಗೇಟ್ ಬಳಿ ಪ್ರತಿಭಟನೆ ನಡೆಯಲಿದೆ.
ಪಡುಬಿದ್ರಿ-ಹೆಜಮಾಡಿ-ಮುಲ್ಕಿಯ ವಾಹನಗಳಿಗೆ ಟೋಲ್‍ನಲ್ಲಿ ಸಂಪೂರ್ಣ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿ ಹಾಗೂ ಹೆಜಮಾಡಿಯ ಒಳರಸ್ತೆಗೆ ನಿರ್ಮಿಸಿರುವ ಟೋಲ್‍ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ ಎಂದು ಟೋಲ್ ವಿರೋಧಿ ಹೋರಾಟ ಸಮಿತಿಯ ಉಪಾಧ್ಯಕ್ಷ ಗುಲಾಂ ಮುಹಮ್ಮದ್ ತಿಳಿಸಿದ್ದಾರೆ.
Next Story