ಕಬಕ ಮುಹಮ್ಮದ್ ತಂಙಳ್ ನಿಧನ

ವಿಟ್ಲ, ಡಿ. 18: ಕಬಕ ನಿವಾಸಿ ಸೈಯದ್ ಮುಹಮ್ಮದ್ ತಂಙಳ್ (65) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ನಿಧನರಾದರು.
ನಂದಾವರ, ಪೋಳ್ಯ, ಸೂರ್ಯ, ತೋಡಾರು, ಕೆಲಿಂಜ ಮೊದಲಾದ ಮಸೀದಿಗಳಲ್ಲಿ ಸೇವೆಗೈದಿದ್ದಾರೆ. ಬುಧವಾರ ಬೆಳಗ್ಗೆ 9 ಗಂಟೆಗೆ ಕಬಕ ಮಸೀದಿ ವಠಾರದಲ್ಲಿ ದಫನ ಕಾರ್ಯ ನೆರವೇರಿಸಲಾಗುವುದು ಎಂದು ಕುಟುಂಬಿಕರು ತಿಳಿಸಿದ್ದಾರೆ.
ಮೃತರು ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರು, ಅಳಿಯಂದಿರಾದ ಸೈಯದ್ ಖುತುಬ್ ತಂಙಳ್ ಮಂಜೇಶ್ವರ, ಸೈಯದ್ ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ ಸಹಿತ ಅಪಾರ ಬಂಧು ಬಳಗ, ಶಿಷ್ಯಂದಿರನ್ನು ಆಗಿದ್ದಾರೆ.
Next Story