‘ತುಳು ನಾಟಕ ಪರ್ಬ’ದ ಪೂರ್ವಸಿದ್ಧತಾ ಸಭೆ

ಮಂಗಳೂರು, ಡಿ.18: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ವತಿಯಿಂದ ಮಂಗಳೂರು ಮಹಾನಗರಪಾಲಿಕೆಯ ಸಹಕಾರದೊಂದಿಗೆ 2019ರ ಮಾರ್ಚ್ 9ರಿಂದ 15ರವರೆಗೆ ನಗರದ ಪುರಭವನದಲ್ಲಿ ಹಮ್ಮಿಕೊಂಡಿರುವ ‘ತುಳು ನಾಟಕ ಪರ್ಬ-2019’ರ ಸಿದ್ಧತೆ ಬಗ್ಗೆ ಜಿಲ್ಲೆಯ ರಂಗಾಸಾಕ್ತರ ಮತ್ತು ಕಲಾ ತಂಡಗಳ ಮುಖ್ಯಸ್ಥರ ಸಭೆಯು ಅಕಾಡಮಿಯ ಕಚೇರಿಯಲ್ಲಿ ಸೋಮವಾರ ಜರುಗಿತು.
ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ರಂಗಕರ್ಮಿಗಳ ಸಲಹೆಯ ಮೇರೆಗೆ ಹಿರಿಯ ರಂಗಕರ್ಮಿಗಳ 7 ನಾಟಕಗಳನ್ನು ಆಯ್ದ ತಂಡಗಳ ಮೂಲಕ ಪ್ರದರ್ಶನಕ್ಕೆ ಕ್ರಮ ವಹಿಸುವುದು ಮತ್ತು ಕೃತಿಕಾರರನ್ನು ಅಂದಿನ ಕಾರ್ಯಕ್ರಮದಲ್ಲಿ ಗುರುತಿಸಿ ಗೌರವಿಸಲು ತೀರ್ಮಾನಿಸಲಾಯಿತು.
ರಂಗಭೂಮಿಯ ಪ್ರಮುಖರಾದ ಸೀತಾರಾಮ ಕುಲಾಲ್, ರೋಹಿದಾಸ್ ಕದ್ರಿ, ವಿ.ಜಿ. ಪಾಲ್, ಪ್ರಭಾಕರ ಕಲ್ಯಾಣಿ, ಲಕ್ಷ್ಮಣ್ ಕುಮಾರ್ ಮಲ್ಲೂರು, ಕಿಶೋರ್ ಡಿ. ಶೆಟ್ಟಿ, ತಮ್ಮ ಲಕ್ಷ್ಮಣ, ದಿನೇಶ್ ಅತ್ತಾವರ, ಸಂಜೀವ ಎಸ್.ಕೆ. ಚಿದಾನಂದ ಅದ್ಯಪಾಡಿ, ಮೋಹನ್ ಕೊಪ್ಪಲ, ಅಕಾಡಮಿಯ ಸದಸ್ಯರಾದ ಶಿವಾನಂದ ಕರ್ಕೇರ, ವಾಸುದೇವ ಬೆಳ್ಳೆ, ನರೇಶ್ ಸಸಿಹಿತ್ಲು, ಬೆನೆಟ್ ಅಮ್ಮಣ್ಣ ಉಪಸ್ಥಿತರಿದ್ದರು.
ತುಳು ನಾಟಕ ಪರ್ಬ ಸಂಚಾಲಕ ತಾರನಾಥ ಗಟ್ಟಿ ಕಾಪಿಕಾಡ್ ಸ್ವಾಗತಿಸಿದರು. ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ವಂದಿಸಿದರು.